ಫಯಾಜ್ ಖಾನ್ ಸಹಾಯಾರ್ಥ ಸಂಗೀತ ಕಛೇರಿ

7

ಫಯಾಜ್ ಖಾನ್ ಸಹಾಯಾರ್ಥ ಸಂಗೀತ ಕಛೇರಿ

Published:
Updated:

ಹೆಸರಾಂತ ಸಾರಂಗಿ ವಾದಕ ಮತ್ತು ಗಾಯಕ ಉಸ್ತಾದ್ ಫಯಾಜ್ ಖಾನ್ ಅವರ ಸಹಾಯಾರ್ಥವಾಗಿ ಅನನ್ಯ ಆರೋಗ್ಯಧಾರಾ ಮತ್ತು ಭಾರತೀಯ ವಿದ್ಯಾಭವನ ಜೊತೆಗೂಡಿ ವಿಶೇಷ ಸಂಗೀತ ಕಛೇರಿಯನ್ನು ಹಮ್ಮಿಕೊಂಡಿದೆ. ಹಾವೇರಿ ಬಳಿ ನಡೆದ ಅಪಘಾತದಲ್ಲಿ ಫಯಾಜ್ ಅವರ ಪತ್ನಿ ಪರ್ವೀನ್ ಹಾಗೂ ಅವರ ನಾದಿನಿ ಮೃತಪಟ್ಟಿದ್ದು, ಫಯಾಜ್ ಅವರ ಬೆನ್ನು ಮತ್ತು ಕಾಲಿಗೂ ತೀವ್ರ ಪೆಟ್ಟಾಗಿದೆ. ಅವರು ಚೇತರಿಸಿಕೊಳ್ಳಲು ಹಲವು ತಿಂಗಳು ಬೇಕಾಗಿದ್ದು, ಅವರ ಕುಟುಂಬಕ್ಕೆ ಆರ್ಥಿಕ ನೆರವು ನೀಡಲೆಂದು ಈ ಸಂಗೀತ ಕಛೇರಿಯನ್ನು ಆಯೋಜಿಸಲಾಗಿದೆ.


 

ಪ್ರಸಿದ್ಧ ಸರೋದ್‌ವಾದಕ ಪಂಡಿತ್ ರಾಜೀವ ತಾರಾನಾಥ್ ಅವರಿಂದ ಸಂಗೀತ ಕಛೇರಿ ನಡೆಯಲಿದ್ದು, ತಬಲಾವಾದಕ ಪಂಡಿತ್ ರವೀಂದ್ರ ಯಾವಗಲ್ ಅವರು ತಬಲಾ ಸಾಥ್ ನೀಡಲಿದ್ದಾರೆ. ಉಸ್ತಾದ್ ಫಯಾಜ್ ಖಾನ್ ಅವರ ಪುತ್ರ ಸರ್ಫ್‌ರಾಜ್ ಸಾರಂಗಿ ವಾದನ ನಡೆಸಿಕೊಡಲಿದ್ದು, ಮೇಘಶ್ಯಾಮ ಅವರು ತಬಲಾ ಸಾಥ್ ನೀಡಲಿದ್ದಾರೆ. 

 

ಕಾರ್ಯಕ್ರಮ ಡಿ. 21, ಶುಕ್ರವಾರದಂದು ಭಾರತೀಯ ವಿದ್ಯಾಭವನದಲ್ಲಿ ಸಂಜೆ 6ಕ್ಕೆ ನಡೆಯಲಿದೆ. ಪ್ರವೇಶ ಉಚಿತ. ಹೆಚ್ಚಿನ ಮಾಹಿತಿಗೆ ಮತ್ತು ಅವರಿಗೆ ಆರ್ಥಿಕ ಬೆಂಬಲ ನೀಡಲು ಬಯಸುವವರು ರವೀಂದ್ರ ಕಾಟೋಟಿ ಅವರನ್ನು  9845793012 ಮೊಬೈಲ್ ನಂಬರಿನ ಮೂಲಕ ಸಂಪರ್ಕಿಸಬಹುದು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry