ಶನಿವಾರ, ಜೂನ್ 19, 2021
27 °C
ವೆಲ್‌ಫೇರ್‌ ಪಾರ್ಟಿ ಆಫ್‌ ಇಂಡಿಯಾ

ಫರ್ಹಾನ್‌ ಬೀದರ್‌ ಅಭ್ಯರ್ಥಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಲೋಕಸಭಾ ಚುನಾವಣೆ ಯಲ್ಲಿ ಬೀದರ್‌ ಕ್ಷೇತ್ರದಿಂದ ವೆಲ್‌ಫೇರ್‌ ಪಾರ್ಟಿ ಆಫ್‌ ಇಂಡಿಯಾ ಅಭ್ಯರ್ಥಿ ಯಾಗಿ ಪಕ್ಷದ ರಾಜ್ಯ ಘಟಕ ಉಪಾಧ್ಯಕ್ಷ ಅಬ್ದುಲ್‌ ಹಮೀದ್‌ ಫರ್ಹಾನ್‌ ಸ್ಪರ್ಧಿ ಸಲಿದ್ದಾರೆ ಎಂದು ಪಕ್ಷದ ರಾಜ್ಯ ಘಟಕ ಅಧ್ಯಕ್ಷ ಅಕ್ಬರಲಿ ಸಾಬ್‌ ಘೋಷಿಸಿದರು.ಎರಡು ವರ್ಷಗಳ ಹಿಂದೆ ರಾಷ್ಟ್ರ ಮಟ್ಟದಲ್ಲಿ ಆರಂಭವಾದ ಪಕ್ಷ ಲೋಕಸಭೆ ಚುನಾವಣೆಯಲ್ಲಿ ದೇಶದಾದ್ಯಂತ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿವೆ. ಅದರಂತೆ ಕರ್ನಾಟಕದಲ್ಲಿ ಮೊದಲು ಬೀದರ್‌ ಕ್ಷೇತ್ರದ ಅಭ್ಯರ್ಥಿಯನ್ನು ಘೋಷಿಸಿದ್ದೇವೆ. ಕೊಪ್ಪಳ, ಬಾಗಲಕೋಟೆ, ಮೈಸೂರು ಮೊದಲಾ ದೆಡೆಗಳಲ್ಲೂ ಅಭ್ಯರ್ಥಿಗಳನ್ನು ಕಣಕ್ಕಿಳಿ ಸುವ ಕುರಿತು ಪಕ್ಷದಲ್ಲಿ ಚಿಂತನೆ ನಡೆದಿದೆ ಎಂದು ಅವರು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ಮೌಲ್ಯಾಧರಿತ ರಾಜಕೀಯವನ್ನು ದೇಶ ದಲ್ಲಿ ತರಬೇಕು ಎನ್ನುವ ಉದ್ದೇಶದಿಂದ ಶುದ್ಧಹಸ್ತರೂ, ಶಿಕ್ಷಣ ರಂಗದಲ್ಲಿ ತಮ್ಮನ್ನು ತೊಡಗಿಸಿಕೊಂ ಡಿರುವ ಫರ್ಹಾನ್‌ರನ್ನು ಪಕ್ಷ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿ ಕೊಂಡಿದೆ ಎಂದರು.  ಇಂದು ರಾಜಕೀಯದಲ್ಲಿ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಮೇಲು ಕೀಳು, ತಾರತಮ್ಯ ತಾಂಡವವಾಡುತ್ತಿದೆ.ರಾಜ ಕಾರಣ ಅಧಃಪತನಗೊಂಡಿದೆ. ಇಂತಹ ಸಂದರ್ಭದಲ್ಲಿ ಪ್ರಮಾಣಿಕರು ರಾಜಕೀ ಯಕ್ಕೆ ಬರಬೇಕು ಎನ್ನುವ ಉದ್ದೇಶ ದಿಂದ ಹಾಗೂ ಸ್ಪಚ್ಛ ರಾಜಕೀಯ ಕನಸು ನನಸಾಗಿಸಲು ಪಕ್ಷವು ಚುನಾವಣೆ ಯಲ್ಲಿ ಸ್ಪರ್ಧಿಸುತ್ತಿದೆ ಎಂದು ಅವರು ಹೇಳಿದರು.ಪಕ್ಷದ ಅಭ್ಯರ್ಥಿ ಅಬ್ದುಲ್‌ ಹಮೀದ್‌ ಫರ್ಹಾನ್ ಮಾತನಾಡಿ, ಬೀದರ್‌ ಕ್ಷೇತ್ರದಲ್ಲಿ ಶೇ 30ರಷ್ಟು ಅಲ್ಪಸಂಖ್ಯಾ ತರ ಮತಗಳಿವೆ. ಆದರೆ ಯಾವುದೇ ಪಕ್ಷದಿಂದ ಅಲ್ಪಸಂಖ್ಯಾತ ಅಭ್ಯರ್ಥಿಗಳು ಸ್ಪರ್ಧಿಸುತ್ತಿಲ್ಲ. ಇದರಿಂದ ನಮಗೆ ಅವ ಕಾಶಗಳಿವೆ. ಆದರೆ ನಮ್ಮದು ಜಾತ್ಯತೀತ ಪಕ್ಷ ನಾವು ಕೇವಲ ಅಲ್ಪಸಂ ಖ್ಯಾರ ಮತಗಳನ್ನಷ್ಟೆ  ಗುರಿಯಾಗಿಸುತ್ತಿಲ್ಲ. ನಮ್ಮ ಗೆಲುವಿಗೆ ಎಲ್ಲರ ಬೆಂಬಲ ಅಗತ್ಯ ಎಂದರು.ಪಕ್ಷದ ಜಿಲ್ಲಾ ಘಟಕ ಅಧ್ಯಕ್ಷ ಸಯ್ಯದ್‌ ಇರ್ಫಾನ್‌, ಅಬ್ದುಲ್‌ ಹಸೀಬ್‌್ ಸಾಬ್‌, ತಾಹೇರ್‌ ಹುಸೈನ್‌, ಸಿ.ಎಂ. ಶಿವಶರಣ, ತಾಜುದ್ದೀನ್‌, ಅಬ್ದುಲ್‌ ಖದ್ದೂಸ್‌ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.