ಫಲಕ್ ಸ್ಥಿತಿ ಚಿಂತಾಜನಕ

7

ಫಲಕ್ ಸ್ಥಿತಿ ಚಿಂತಾಜನಕ

Published:
Updated:

ನವದೆಹಲಿ(ಪಿಟಿಐ):  ಏಮ್ಸ ಆಸ್ಪತ್ರೆಯಲ್ಲಿ  ಚಿಕಿತ್ಸೆ ಪಡೆಯುತ್ತಿರುವ ಎರಡು ವರ್ಷದ ಮಗು  ಫಲಕ್‌ಳ ಆರೋಗ್ಯ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ಸೋಮವಾರ ವೈದ್ಯರು ತಿಳಿಸಿದ್ದಾರೆ.ಕೃತಕ ಉಸಿರಾಟದಲ್ಲಿರುವ  ಫಲಕ್‌ಳ  ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿಲ್ಲ. ಮೆದುಳಿನ ಸೋಂಕು ಹಾಗೇ ಇದೆ ಎಂದು  ಏಮ್ಸನ ವೈದ್ಯ ದೀಪಕ್ ಅಗರ್‌ವಾಲ್ ತಿಳಿಸಿದ್ದಾರೆ.ಜನವರಿ 18 ರಂದು ಫಲಕ್‌ಳನ್ನು ಮಾರಣಾಂತಿಕವಾಗಿ ಜಜ್ಜಿ, ನಾನೇ ತಾಯಿ ಎಂದು ಹೇಳಿಕೊಂಡು 15 ವರ್ಷದ ಬಾಲಕಿಯೊಬ್ಬಳು ಏಮ್ಸ ಆಸ್ಪತ್ರೆಗೆ ದಾಖಲಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ರಾಜ್‌ಕುಮಾರ್ ಗುಪ್ತ ಸೇರಿದಂತೆ 9 ಜನರನ್ನು ಬಂಧಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry