ಶುಕ್ರವಾರ, ಜನವರಿ 24, 2020
20 °C

ಫಲಪುಷ್ಪ ಪ್ರದರ್ಶನ 26ರಿಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು: ತೋಟಗಾರಿಕೆ ಇಲಾಖೆ, ಜಿಲ್ಲಾ ಪಂಚಾಯಿತಿ, ಮೈಸೂರು ಉದ್ಯಾನ ಕಲಾಸಂಘ ಹಾಗೂ ಆತ್ಮ ಯೋಜನೆ ಸಹಯೋಗ ದೊಂದಿಗೆ ತೋಟಗಾರಿಕೆ ಉಪ ನಿರ್ದೇಶಕರ ಕಚೇರಿ ಆವರಣದಲ್ಲಿ ಇದೇ 26ರಿಂದ 28 ರವರೆಗೆ ಫಲಪುಷ್ಪ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ.ತೋಟಗಾರಿಕೆ ಬೆಳೆಗಳ ಕುರಿತು ಮಾಹಿತಿ ನೀಡುವುದು, ಅಲಂಕಾರಿಕ ತೋಟಗಳ ನಿರ್ಮಾಣ, ತೋಟಗಾರಿಕೆ ಬೆಳೆಗಳನ್ನು ವೈಜ್ಞಾನಿಕವಾಗಿ ಬೆ ೆಯಲು ರೈತರಿಗೆ ಉತ್ತೇಜನ ನೀಡಲು ಈ ಕಾರ್ಯಕ್ರಮ ಸಹಕಾರಿಯಾಗಲಿದೆ ಎಂದು ಸುದ್ದಿ ಗೋಷ್ಠಿಯಲ್ಲಿ ಸೋಮ ವಾರ ಮೈಸೂರು ಉದ್ಯಾನ ಕಲಾ ಸಂಘದ ಪದನಿಮಿತ್ತ ಕಾರ್ಯದರ್ಶಿ ಬಿ.ಆರ್.ಅನಿತಾ ತಿಳಿಸಿದರು.ಇದೇ 26ರಂದು ಬೆಳಿಗ್ಗೆ 11ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಫಲಪುಷ್ಪ ಪ್ರದರ್ಶನ ಉದ್ಘಾಟಿಸಲಿದ್ದಾರೆ. ಶಾಸಕ ಸಿ.ಟಿ.ರವಿ ಅಧ್ಯಕ್ಷತೆ ವಹಿ ಸುವರು. ಪುಷ್ಪಕಲಾಕೃತಿಯನ್ನುಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುಚಿತಾ ನರೇಂದ್ರ ಉದ್ಘಾಟಿಸುವರು.ಇಲಾಖೆ ಮಳಿಗೆಗಳನ್ನು ಜಿ.ಪಂ. ಉಪಾಧ್ಯಕ್ಷ ಎಸ್.ಬಿ.ಆನಂದಪ್ಪ ಪ್ರದರ್ಶನ ಮಳಿಗೆಗಳನ್ನು ಜಿಲ್ಲಾ ಪಂಚಾಯಿತಿ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಕೆ.ಶಿವೇಗೌಡ ಉದ್ಘಾಟಿಸುವರು. ಜಿಲ್ಲೆಯ ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಚುನಾಯಿತ ಪ್ರತಿನಿಧಿಗಳು ಭಾಗವಹಿಸುವರೆಂದು ಹೇಳಿದರು. ಇದೇ 28ರ ಸಂಜೆ 6.30ಕ್ಕೆ ಸಮಾರೋಪ ಸಮಾರಂಭದಲ್ಲಿ ಎಸ್ಟೇಟ್ ತೋಟ, ನಗರ ತೋಟಗಳ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಗುವು ದು ಎಂದರು. ಫಲಪುಷ್ಪ ಪ್ರದರ್ಶನಲ್ಲಿ ಹೂವಿನ ಆಕೃತಿಗಳು, ಪುಷ್ಪ ಕಲಾಕೃತಿಗಳು, ಹೂವಿನ ಜೋಡಣೆ, ಥಾಯ್ ಆರ್ಟ್, ರಂಗೋಲಿ, ಬಾಳೆಮನೆ, ತರಕಾರಿ ಕೆತ್ತನೆಗಳು ಮತ್ತು ರೈತರು ಬೆಳೆದ ವಿವಿಧ ಜಾತಿಯ ಉತ್ತಮ ತರಕಾರಿಗಳು ಪ್ರದರ್ಶನಗೊಳ್ಳಲಿವೆ ಎಂದು ಹೇಳಿದರು.ಮೈಸೂರು ಉದ್ಯಾನವನ ಕಲಾಸಂಘದ ನಿರ್ದೇಶಕ ಮೋಹನ್ ಇದ್ದರು.

 

ಪ್ರತಿಕ್ರಿಯಿಸಿ (+)