ಫಲಾಕ್ ಪ್ರಕರಣ: ಮತ್ತೊಬ್ಬಳ ಬಂಧನ

7

ಫಲಾಕ್ ಪ್ರಕರಣ: ಮತ್ತೊಬ್ಬಳ ಬಂಧನ

Published:
Updated:

ನವದೆಹಲಿ (ಪಿಟಿಐ): ಜರ್ಜರಿತ ಸ್ಥಿತಿಯಲ್ಲಿದ್ದ 2 ವರ್ಷದ ಹೆಣ್ಣು ಮಗು ಫಲಾಕ್‌ಳನ್ನು ಏಮ್ಸಗೆ ದಾಖಲಿಸಿದ್ದ 15 ವರ್ಷದ ಬಾಲಕಿಯನ್ನು ಬಲವಂತವಾಗಿ ವೇಶ್ಯಾವಾಟಿಕೆಗೆ ತಳ್ಳಿದ ಆರೋಪದಲ್ಲಿ  ಮತ್ತೊಬ್ಬ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.

ಈ ಮೂಲಕ,  ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಒಟ್ಟು ನಾಲ್ವರನ್ನು ಬಂಧಿಸಿದಂತಾಗಿದೆ.

ಬಾಲಕಿಯನ್ನು ತ್ಯಜಿಸಿದ ಆರೋಪದಲ್ಲಿ ಆಕೆಯ ತಂದೆ ಜಿತೇಂದರ್ ಗುಪ್ತಾ ಎಂಬುವವರನ್ನು ಪೊಲೀಸರು ಬುಧವಾರ ಬಂಧಿಸಿದ್ದರು.

ಗುಪ್ತಾ ಅಲ್ಲದೇ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೂಜಾ ಎಂಬ ಮಹಿಳೆ ಮತ್ತು ಆಕೆಯ ಪತಿ ಸಂದೀಪ್ ಪಾಂಡೆ ಎಂಬಾತನನ್ನೂ ಪೊಲೀಸರು ಬುಧವಾರ ವಶಕ್ಕೆ ತೆಗೆದುಕೊಂಡಿದ್ದರು.`ಬಾಲಕಿಯನ್ನು ವೇಶ್ಯಾವಾಟಿಕೆಗೆ ತಳ್ಳಿದ ಆರೋಪದಲ್ಲಿ ಆರತಿ ಎಂಬ ಮತ್ತೊಬ್ಬ ಮಹಿಳೆಯನ್ನು ಬಂಧಿಸಲಾಗಿದೆ. ಈಕೆ ಪೂಜಾಳ ಒಡನಾಡಿಯಾಗಿದ್ದಳು~ ಎಂದು ಪೊಲೀಸರು ಹೇಳಿದ್ದಾರೆ.15 ವರ್ಷದ ಬಾಲಕಿ 2ವರ್ಷದ ಫಲಾಕ್‌ಳನ್ನು ತನ್ನ ಮಗುವೆಂದು ಹೇಳಿಕೊಂಡು ಆಸ್ಪತ್ರೆಗೆ ದಾಖಲಿಸಿದ ನಂತರ ಮಾಧ್ಯಮಗಳಲ್ಲಿ ಸುದ್ದಿಯಾಗಿದ್ದಳು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry