ಫಲಾನುಭವಿಗಳ ಆಯ್ಕೆಗೆ ತಾ.ಪಂ. ಅನುಮೋದನೆ

ಮಂಗಳವಾರ, ಜೂಲೈ 23, 2019
27 °C

ಫಲಾನುಭವಿಗಳ ಆಯ್ಕೆಗೆ ತಾ.ಪಂ. ಅನುಮೋದನೆ

Published:
Updated:

ಹುನಗುಂದ (ಅಮೀನಗಡ): ತಾಲ್ಲೂಕಿನ ಪರಿಶಿಷ್ಟ ಜಾತಿ, ಪಂಗಡದ ಜನರಿಗೆ ವಿವಿಧ ಇಲಾಖೆಗಳಲ್ಲಿರುವ   ಯೋಜನೆಗಳಿಗೆ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿದ ತಾಲ್ಲೂಕಾ ಪಂಚಾಯಿತಿಯು ಇಂದು ಅನುಮೋದನೆ ನೀಡಿತು.ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಶರಣಮ್ಮ ಮಾಟೂರ ಅಧ್ಯಕ್ಷತೆಯಲ್ಲಿ ಸಭಾಭವನದಲ್ಲಿ ಶುಕ್ರವಾರ ನಡೆದ ತಾ.ಪಂ ಸಭೆಯಲ್ಲಿ ವಿವಿಧ ಇಲಾಖೆಗಳಲ್ಲಿ ಪರಿಶಿಷ್ಟ ಜಾತಿ, ಪಂಡಗದ ಜನರಿಗೆ ಇರುವ ಸೌಲಭ್ಯಗಳ ವಿವರಣೆ ನೀಡಿದರು.ಪಶು ಸಂಗೋಪನೆ ಇಲಾಖೆಯಿಂದ 13ಜನರಿಗೆ ಹಸು ಒದಗಿಸುವ ಯೋಜನೆ, ಕೈಗಾರಿಕೆ ಮತ್ತು ಕೃಷಿ ಇಲಾಖೆಯ ಯೋಜನೆಗೆ 61 ಫಲಾನುಭವಿಗಳು,ತೋಟಗಾರಿಕೆ ಇಲಾಖೆಯ ಯೋಜನೆಗೆ 11 ಫಲಾನುಭವಿಗಳನ್ನು ಆಯ್ಕೆ ಮಾಡಲಾಯಿತು.ತಾಲ್ಲೂಕು ಕೃಷಿ ಅಧಿಕಾರಿ ಗೋಪ್ಯಾ ನಾಯ್ಕ ಅವರು, ಅಮೀನಗಡ ಹೋಬಳಿ ವ್ಯಾಪ್ತಿಯ ಪ್ರದೇಶದಲ್ಲಿ ಕಳೆದ ಎರಡು ಮೂರು ದಿನಗಳಿಂದ ಉತ್ತಮ ಮಳೆಯಾಗಿದೆ. ಜುಲೈ ತಿಂಗಳ ಕೊನೆಯವರೆಗೂ ಸಜ್ಜಿ, ತೊಗರಿ, ಸೂರ್ಯಕಾಂತಿ ಬೆಳೆಗಳನ್ನು ಬಿತ್ತನೆ ಮಾಡಬಹುದು. ತಾಲ್ಲೂಕಿನಲ್ಲಿ ಬೀಜ, ರಸಗೊಬ್ಬರದ ಕೊರತೆಯಿಲ್ಲ ಎಂದರು.ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಕುಸುಮಾ ಮಾಗಿ ಅವರು, ರಾಷ್ಟ್ರೀಯ ಲಸಿಕೆಯಲ್ಲಿ ಶೇ 86ರಷ್ಟು ಸಾಧನೆ ಮಾಡಲಾಗಿದೆ. ತಾಲ್ಲೂಕಿನಲ್ಲಿ 453 ಜನರ ಆರೋಗ್ಯ ತಪಾಸಣೆ ಮಾಡಿದಾಗ ಅದರಲ್ಲಿ 10ಜನರಲ್ಲಿ ಎಚ್‌ಐವಿ ಪಾಜಿಟಿವ್ ಕಂಡು ಬಂದಿದೆ. ಅಪೌಷ್ಟಿಕ ಮಕ್ಕಳ ಆರೋಗ್ಯವನ್ನು ಇದೇ 21ರಂದು ತಪಾಸಣೆ ನಡೆಸಲಾಗುವುದು ಎಂದರು.ತಾಲ್ಲೂಕಿನಲ್ಲಿ  7 ಸಂಶಯ ಡೆಂಗೆ ಪ್ರಕರಣಗಳು ಕಂಡು ಬಂದಿದ್ದು, ಅದರಲ್ಲಿ ಅಮೀನಗಡ, ಇಳಕಲ್, ಹುನಗುಂದ ಒಂದೊಂದು ಖಚಿತಪಟ್ಟ ಡೆಂಗೆ ಪ್ರಕರಣಗಳಾಗಿವೆ ಎಂದು ಸಭೆಗೆ ಮಾಹಿತಿ ನೀಡಿದ ಅವರು, ತಾಲ್ಲೂಕಿನ ಪ್ರತಿಯೊಂದು ಪ್ರದೇಶದಲ್ಲಿ ಫಾಗಿಂಗ್ ಮಾಡಲು ಸಿಬ್ಬಂದಿಗೆ ಸೂಚನೆ ನೀಡಲಾಗಿದೆ ಎಂದರು.ಕ್ಷೇತ್ರ ಶಿಕ್ಷಣಾಧಿಕಾರಿ ವಿಜಯಲಕ್ಷ್ಮಿ ಒಡೆಯರ ಅವರು,ತಾಲ್ಲೂಕಿನಲ್ಲಿ ಎಲ್ಲಾ ಶಾಲೆಗಳಿಗೆ ಪಠ್ಯಪುಸ್ತಕಗಳನ್ನು ಒದಗಿಸಲಾಗಿದೆ. ತಾಲ್ಲೂಕಿನಲ್ಲಿ ಒಟ್ಟು 23 ಪ್ರಾಥಮಿಕ ಶಾಲೆಗಳನ್ನು 8ನೇ ತರಗತಿಗೆ ಮೇಲ್ದರ್ಜೆಗೇರಿಸಲಾಗಿದೆ. ಪ್ರೌಢಶಾಲೆಗಳಿಗೆ 8ನೇ ತರಗತಿ ಪುಸ್ತಕ ನೀಡಿದ್ದರಿಂದ ಪ್ರಾಥಮಿಕ ಶಾಲೆಯ 8ನೇ ತರಗತಿ ವಿದ್ಯಾರ್ಥಿಗಳಿಗೆ ಪುಸ್ತಕ ನೀಡುವದು ವಿಳಂಬವಾಗಿದೆ. ಪ್ರೌಢ ಶಾಲೆಗಳಿಂದ 8ನೇ ತರಗತಿ ಪುಸ್ತಕ ಗಳನ್ನು ಮರಳಿ ಪಡೆದುಕೊಳ್ಳುವ ಪ್ರಕ್ರಿಯೆ ಪ್ರಾರಂಭವಾಗಿದೆ ಶೀಘ್ರದಲ್ಲಿ ದೊರೆಯಲಿವೆ.ಮಾಹಿತಿ ಸಿಂಧು ಅನುದಾನದಲ್ಲಿ ಬಂದ ಕಂಪ್ಯೂಟರ್‌ಗಳನ್ನು ನಿರ್ವಹಣೆ ಮಾಡಲು ಅನುದಾನ ಇರದ್ದರಿಂದ ಕಂಪ್ಯೂಟರ್ ಶಿಕ್ಷಣ ಬಂದಾಗಿದೆ ಎಂದರು.ಉಪಾಧ್ಯಕ್ಷ ಶಂಕ್ರಪ್ಪ ನೇಗಲಿ, ಸದಸ್ಯರಾದ ಹನಮಂತ ವೈದ್ಯ, ಬಸವರಾಜ ಭಜಂತ್ರಿ, ರಾಘವೇಂದ್ರ ಪಾಟೀಲ, ಸೈಯ್ಯದಪೀರಾ ಖಾದ್ರಿ ಚರ್ಚೆಯಲ್ಲಿ ಭಾಗವಹಿಸಿದ್ದರು.ತಹಶೀಲ್ದಾರ ಅಪರ್ಣಾ ಪಾವಟೆ, ತಾಪಂ ಕಾರ್ಯನಿರ್ವಾಹಕಾಧಿಕಾರಿ ಆರ್.ವಿ. ತೋಟದ ಸಭೆಯಲ್ಲಿ ಹಾಜರಿದ್ದರು.ಗಂಭೀರ ಚರ್ಚೆಯಿಲ್ಲದ ಸಭೆ

ಪ್ರತಿಯೊಂದು ವಿಷಯಗಳ ಬಗ್ಗೆ ಗಂಭೀರವಾದ ಚರ್ಚೆ, ಪರಸ್ಪರ ಸಂವಾದಗಳು ನಡೆಯಬೇಕಿದ್ದ ಸಭೆಯಲ್ಲಿ ಕೇವಲ ಕಾಟಾಚಾರಕ್ಕೆ ನಡೆದಿದೇನೋ ಎಂಬಂತೆ ಕಂಡು ಬಂತು.ಅಧಿಕಾರಿಗಳು ಸಂಪೂರ್ಣವಾದ ಮಾಹಿತಿ ನೀಡುತ್ತಿದ್ದರೆ ಅದನ್ನು ಅಲಿಸು ವಂತಹ ಸಹನೆಯನ್ನು ಕಳೆದುಕೊಂ ಡಿದ್ದ ಕೆಲ ಸದಸ್ಯರು, ಸ್ವಲ್ಪ ಪ್ರಮಾಣ ದಲ್ಲಿ ಮಾತ್ರ ಮಾಹಿತಿ ನೀಡಿ ಎಂದು ಹೇಳುತ್ತಿದ್ದನ್ನು ಎದ್ದು ಕಾಣುತ್ತಿತ್ತು.ಕೆಲವೇ ಕೆಲವು ಸದಸ್ಯರು ಮಾತ್ರ ಅಧಿಕಾರಿಗಳು ಹೇಳುವ ವಿಷಯಗಳ ಕುರಿತು ಚರ್ಚೆಯಲ್ಲಿ ತೊಡಗಿದ್ದು ಕಂಡು ಬಂತು. ಕೆಲವು ಸದಸ್ಯರು, ಅಧಿಕಾರಿಗಳು ಸಭೆ ನಡೆಯುತ್ತಿರು ವಾಗಲೇ ಪರಸ್ಪರ ಮಾತಿನ ಗುಂಗಿನಲ್ಲಿ ತೊಡಗಿದ್ದರು.  ಸದಸ್ಯರು ಮಧ್ಯದಲ್ಲಿ ಹೊರ ಹೋಗಿ ಬರುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry