ಭಾನುವಾರ, ಮೇ 16, 2021
28 °C

ಫಲಾನುಭವಿ ಕೈ ತಲುಪದ ವೃದ್ಧಾಪ್ಯ ವೇತನ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುರುಗೋಡು: ನಾಲ್ಕು ವರ್ಷದಿಂದ ಸರ್ಕಾರ ದಿಂದ ವೃದ್ಯಾಪ ವೇತನ ಬರುತ್ತಿದ್ದರು ಫಲಾನುಭವಿಗೆ ಹಣ ಸಂದಾಯವಾಗದ ಪ್ರಕರಣ ಪಟ್ಟಣದಲ್ಲಿ ಬೆಳಕಿಗೆ ಬಂದಿದೆ. ಪಟ್ಟಣದ ಹರಿಕೃಪ ಕಾಲೋನಿ ನಿವಾಸಿ ಈಡಿಗರ ಸಂಜೀವಮ್ಮ ವೃದ್ಧಾಪ್ಯ ವೇತನ ವಂಚಿತರು. ಕಣ್ಣು ಕಾಣದ 70ರ ವೃದ್ದೆ ಸಂಜೀವಮ್ಮ ಪ್ರತಿ ತಿಂಗಳು ಮಂಜೂರಾತಿ ಆದೇಶದ  ದಾಖಲೆ ಹಿಡಿದು ಗೋಳು ತೋಡಿಕೊಳ್ಳುತ್ತ ಕಚೇರಿಯಿಂದ ಕಚೇರಿಗೆ ಅಲೆಯುತ್ತಿದ್ದಾರೆ.    2008-09ನೇ ಸಾಲಿನಲ್ಲಿ ಸಂಜೀವಮ್ಮಗೆ ಕಂದಾಯ ಇಲಾಖೆ ಮಾಸಿಕ  400 ರೂಪಾಯಿ ವೃದ್ದಾಪ್ಯ ವೇತನ ಮಂಜೂರು ಮಾಡಿ ಆದೇಶ ನೀಡಿದೆ.     ಜಿಲ್ಲಾ ಖಜಾನೆ ತಯಾರಿಸಿರುವ ವೃದಾಪ್ಯ ವೇತನ ಫಲಾನುಭವಿ ಪಟ್ಟಿಯಲ್ಲಿ ಮತ್ತು ಪ್ರತಿ ತಿಂಗಳು ಖಜಾನೆಯಿಂದ ಅಂಚೆಕಚೇರಿಗೆ ವೃದ್ದಾಪ್ಯ ವೇತನ  ಸಂದಾಯವಾಗುವ ಪಟ್ಟಿಯಲ್ಲಿ ಇವರ ಹೆಸರಿದೆ. ಆದರೆ ಹಣ ಮಾತ್ರ ಈವರೆಗೆ ತಲುಪಿಲ್ಲ.  ಸುಮಾರು 30ವರ್ಷಗಳ ಕಾಲ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಅರೆಕಾಲಿಕ ಆಯಾ ಕೆಲಸ ನಿರ್ವಹಿಸಿದ ಸಂಜೀವಮ್ಮಗೆ ಮಕ್ಕಳಿಲ್ಲ. ಹೊಲ, ಮನೆ ಯಾವುದೂ ಇಲ್ಲ. ಕಣ್ಣು ಕಾಣುತ್ತಿಲ್ಲ. ಕೈಕಾಲು ಬಾತುಕೊಂಡಿವೆ. ನಡೆದಾಡಲು ಅಸಹಾಯಕರಾಗಿದ್ದಾರೆ. ಸ್ವಂತ ಆಶ್ರಯವಿಲ್ಲದ ಕಾರಣ ತಂಗಿಯ ಮನೆಯಲ್ಲಿದ್ದಾರೆ.    ಕೂಲಿಯಿಂದ ಬದುಕು ಸಾಗಿಸುತ್ತಿರುವ ತಂಗಿಯ ಕುಟುಂಬ ಕಷ್ಟದ್ದಲ್ಲಿರುವ ಕಾರಣ ತನ್ನ ಕಷ್ಟದ ಹೊರೆ ಏಕೆ ಎನ್ನುವ ಸಂಜೀವಮ್ಮ, ಮರೀಚಿಕೆಯಾಗಿವ ವೃದ್ದಾಪ್ಯ ವೇತನದ ಜಾಡು ಹುಡುಕುತ್ತಲೆ ಇದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.