ಮಂಗಳವಾರ, ಮೇ 18, 2021
30 °C

ಫಾರಂಗಳು ಅರಣ್ಯ ಇಲಾಖೆ ವ್ಯಾಪ್ತಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ತೋಟಗಾರಿಕೆ ಇಲಾಖೆಗೆ ಸೇರಿದ 43 ಫಾರಂಗಳನ್ನೂ ಅರಣ್ಯ ಇಲಾಖೆ ತನ್ನ ವಶಕ್ಕೆ ತೆಗೆದುಕೊಂಡು, ಸಾಮಾಜಿಕ ಅರಣ್ಯ ಅಭಿವೃದ್ಧಿಪಡಿಸಲಿದೆ ಎಂದು ಅರಣ್ಯ ಸಚಿವ ಸಿ.ಪಿ.ಯೋಗೀಶ್ವರ್ ಶನಿವಾರ ಇಲ್ಲಿ ತಿಳಿಸಿದರು.`ಈ ಫಾರಂಗಳನ್ನು ಖಾಸಗಿಯವರಿಗೆ ನೀಡಲು ಸರ್ಕಾರ ತೀರ್ಮಾನಿಸಿತ್ತು. ಸಂಪುಟ ಸಭೆಗೆ ಕಡತವೂ ಸಿದ್ಧವಾಗಿತ್ತು. ಈ ವಿಚಾರ ಗೊತ್ತಾದ ನಂತರ ತೋಟಗಾರಿಕೆ ಸಚಿವರ ಜತೆ ಮಾತುಕತೆ ನಡೆಸಿ, ಖಾಸಗಿಯವರಿಗೆ ಬದಲಾಗಿ ಅರಣ್ಯ ಇಲಾಖೆಗೇ ಕೊಡಿ ಎನ್ನುವ ಮನವಿ ಮಾಡಿದ್ದೇನೆ. ಇದನ್ನು ತೋಟಗಾರಿಕೆ ಸಚಿವರೂ ಒಪ್ಪಿದ್ದಾರೆ~ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.ನೇಮಕ: ಅರಣ್ಯ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದ್ದು, ಆದಷ್ಟು ಬೇಗ 63 ಮಂದಿ ವಲಯ ಅರಣ್ಯಾಧಿಕಾರಿ, 1000 ಮಂದಿ ಅರಣ್ಯ ರಕ್ಷಕರು, 500 ಮಂದಿ ವನ ಪಾಲಕರನ್ನು ನೇಮಿಸಿಕೊಳ್ಳಲಾಗುವುದು. ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಪಕ್ಕದ ಕಂದಾಯ ಜಮೀನಿನಲ್ಲಿ ಹೊಸದಾಗಿ ರೆಸಾರ್ಟ್ ನಿರ್ಮಿಸುತ್ತಿದ್ದು, ಅದಕ್ಕೆ ತಡೆ ನೀಡಲಾಗುವುದು ಎಂದು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.