`ಫಾರೂಕಿಗೆ ಪಾಕ್ ಸೂಕ್ತ'

7

`ಫಾರೂಕಿಗೆ ಪಾಕ್ ಸೂಕ್ತ'

Published:
Updated:

ಕೊಯಮತ್ತೂರು (ಪಿಟಿಐ): `ಸಮಾಜವಾದಿ ಪಕ್ಷದ ಮುಖಂಡ ಕಮಾಲ್ ಫಾರೂಕಿ ಪಾಕಿಸ್ತಾನದಲ್ಲಿ ಇರುವುದಕ್ಕೆ ಸೂಕ್ತವಾದ ವ್ಯಕ್ತಿ' ಎಂದು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಅಂತರರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷ ಪ್ರವೀಣ್ ತೊಗಾಡಿಯಾ ಹೇಳಿದ್ದಾರೆ.`ಉಗ್ರ ಯಾಸೀನ್ ಭಟ್ಕಳನನ್ನು ಆತನ ಅಪರಾಧ ಅಥವಾ ಆತ ಹೊಂದಿರುವ ಧರ್ಮದ ಆಧಾರದ ಮೇಲೆ ಬಂಧಿಸಲಾಗಿದೆಯೇ' ಎಂದು ಇತ್ತೀಚಿಗೆ ಪ್ರಶ್ನೆ ಮಾಡಿದ್ದ ಫಾರೂಕಿ ಹೇಳಿಕೆಗೆ ತೊಗಾಡಿಯಾ ಈ ಮೇಲಿನಂತೆ ಪ್ರತಿಕ್ರಿಯಿಸಿದ್ದಾರೆ.`ದೇಶ ವಿರೋಧಿಗಳು ಮತ್ತು ಭಯೋತ್ಪಾದಕರನ್ನು ಯಾರು ಬೆಂಬಲಿಸುತ್ತಾರೋ ಅವರನ್ನು ರಾಷ್ಟ್ರ ವಿರೋಧಿಗಳಾಗಿ ಗುರುತಿಸಬೇಕು. ಅಂತಹವರು ಪಾಕಿಸ್ತಾನದಲ್ಲಿ ಇರಬೇಕು' ಎಂದು ತೊಗಾಡಿಯಾ ಭಾನುವಾರ ಇಲ್ಲಿ ಸುದ್ದಿಗಾರರಿಗೆ ಹೇಳಿದರು.ಫಾರೂಕಿ ನೀಡಿರುವ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಕಾಂಗ್ರೆಸ್ ಮತ್ತು ಬಿಜೆಪಿ,`ಇದು ಅವಿವೇಕತನ' ಹೇಳಿಕೆ ಎಂದಿವೆ. ಫಾರೂಕಿಯ ವಿವಾದಾತ್ಮಕ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿರುವ ಸಮಾಜವಾದಿ ಪಕ್ಷ, `ಇದು ಅವರ ವೈಯಕ್ತಿಕ ಹೇಳಿಕೆ ಹೊರತು ಪಕ್ಷವನ್ನು ಪ್ರತಿನಿಧಿಸುವುದಿಲ್ಲ' ಎಂದು ಪಕ್ಷದ ಹಿರಿಯ ಮುಖಂಡ ರಾಮ್‌ಗೋಪಾಲ್ ಯಾದವ್ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry