ಫಾರೆವರ್ ಜಾಯ್

7

ಫಾರೆವರ್ ಜಾಯ್

Published:
Updated:

 ವಿಶ್ವವಿಖ್ಯಾತ ಡಿಬೀರ್ಸ್‌ ಗ್ರೂಪ್ ಆಫ್ ಕಂಪೆನಿಗಳ ವಜ್ರದ ಬ್ರಾಂಡ್ ಫಾರೆವರ್ ಈಗ ಜಾಯ್‌ಆಲೂಕಾಸ್ ಮಳಿಗೆಯೊಂದಿಗೆ ಕೈಜೋಡಿಸಿದೆ. ಇದಕ್ಕಾಗಿ ನಡೆದ ಸಮಾರಂಭದಲ್ಲಿ ಭಾಗವಹಿಸಲು ವಿಶೇಷವಾಗಿ ಬಂದಿದ್ದರು ನಟಿ ಸಾರಾ ಜೇನ್ ಡಯಾಸ್.‘ಮಹಿಳೆಯಂತೆಯೇ ಸೌಂದರ್ಯ, ಸ್ಫೂರ್ತಿ ಮತ್ತು ಸಮಗ್ರತೆಯನ್ನು ಫಾರೆವರ್ ಪ್ರತಿನಿಧಿಸುತ್ತದೆ. ವಿಶ್ವದ ಅತ್ಯಂತ ಕಾಳಜಿಪೂರ್ವಕವಾಗಿ ಕೆತ್ತನೆ ಮಾಡಿದ ಆಯ್ದ ಉತ್ಕೃಷ್ಟ ವಜ್ರ ವೈವಿಧ್ಯ ಈ ಫಾರೆವರ್, ಇದರ ಹೃದಯದಾಳದಲ್ಲಿ ವಿಶಿಷ್ಟ ಗುರುತಿನ ಸಂಖ್ಯೆ ಇರುವುದು ವಿಶ್ವಾಸಾರ್ಹತೆಗೆ ಮತ್ತಷ್ಟು ಮೆರುಗು ನೀಡುತ್ತಿದೆ’ ಎಂದು  ಮೆಚ್ಚುಗೆ ಸೂಚಿಸಿದರು.ಇದೇ ಸಂದರ್ಭದಲ್ಲಿ ರೂಪದರ್ಶಿಗಳು ಫಾರೇವರ್ ವಜ್ರದಲ್ಲಿ ತಯಾರಾದ ಹೊಳೆವ ಆಭರಣ ಧರಿಸಿ ಕ್ಯಾಟ್‌ವಾಕ್ ಮಾಡಿ ಆ ಸಂಜೆಗೆ ರಂಗು ತುಂಬಿದರು.ಆಲೂಕಾಸ್‌ನ ಅಧ್ಯಕ್ಷ ಜಾಯ್ ಆಲೂಕಾಸ್, ಗ್ರಾಹಕರಿಗೆ ಅತ್ಯುತ್ತಮವಾದುದನ್ನೇ ನೀಡುವ ತಮ್ಮ ಆಶಯಕ್ಕೆ ಇದು ಜೊತೆಯಾಗಿದೆ ಎಂದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry