ಫಾರ್ಮುಲಾ ಒನ್‌: ವೆಟೆಲ್‌ಗೆ ಅಗ್ರಸ್ಥಾನ

7

ಫಾರ್ಮುಲಾ ಒನ್‌: ವೆಟೆಲ್‌ಗೆ ಅಗ್ರಸ್ಥಾನ

Published:
Updated:

ಸಿಂಗಪುರ (ಎಎಫ್‌ಪಿ): ರೆಡ್‌ಬುಲ್‌ ತಂಡದ ಸೆಬಾಸ್ಟಿಯನ್‌ ವೆಟೆಲ್‌ ಭಾನುವಾರ ನಡೆದ ಸಿಂಗಪುರ ಗ್ರ್ಯಾನ್‌ ಪ್ರಿ ಫಾರ್ಮುಲಾ ಒನ್‌ ರೇಸ್‌ನಲ್ಲಿ ಅಗ್ರಸ್ಥಾನ ಪಡೆದರು.ಫೆರಾರಿ ತಂಡದ ಫೆರ್ನಾಂಡೊ ಅಲೊನ್ಸೊ ಹಾಗೂ ಲೋಟಸ್‌ ತಂಡದ ಕಿಮಿ ರೈಕೊನೆನ್‌ ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನ ತಮ್ಮದಾಗಿಸಿಕೊಂಡರು.ಸಹಾರಾ ಫೋರ್ಸ್‌ ಇಂಡಿಯಾ ತಂಡದ ಅಡ್ರಿಯಾನ್‌ ಸುಟಿಲ್‌ 10ನೇ ಸ್ಥಾನ ಪಡೆದು ತಮ್ಮ ತಂಡಕ್ಕೆ ಒಂದು ಪಾಯಿಂಟ್‌ ಗಿಟ್ಟಿಸಿಕೊಂಡರು. ಈ ತಂಡದ ಇನ್ನೊಬ್ಬ ಚಾಲಕ ಪೌಲ್‌ ಡಿ ರೆಸ್ಟಾ ಅರ್ಧದಲ್ಲೇ ಹಿಂದೆ ಸರಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry