ಫಾರ್ಮುಲಾ ಒನ್: ನಿಕೊ ಹಕೆನ್‌ಬರ್ಗ್‌ಗೆ ಆರನೇ ಸ್ಥಾನ

7

ಫಾರ್ಮುಲಾ ಒನ್: ನಿಕೊ ಹಕೆನ್‌ಬರ್ಗ್‌ಗೆ ಆರನೇ ಸ್ಥಾನ

Published:
Updated:

ಯಾಂಗಮ್, ದಕ್ಷಿಣ ಕೊರಿಯ (ಪಿಟಿಐ): ಫೋರ್ಸ್ ಇಂಡಿಯಾ ತಂಡದ ನಿಕೊ ಹಕೆನ್‌ಬರ್ಗ್ ಭಾನುವಾರ ನಡೆದ ಕೊರಿಯನ್ ಗ್ರ್ಯಾನ್ ಪ್ರಿ ಫಾರ್ಮುಲಾ ಒನ್ ರೇಸ್‌ನಲ್ಲಿ ಆರನೇ ಸ್ಥಾನ ಪಡೆದರು. ಈ ಮೂಲಕ ತಮ್ಮ ತಂಡಕ್ಕೆ ಎಂಟು ಪಾಯಿಂಟ್ ತಂದುಕೊಟ್ಟರು.ಇದೇ ತಂಡದ ಇನ್ನೊಬ್ಬ ಚಾಲಕ ಪೌಲ್ ಡಿ ರೆಸ್ಟಾ 12ನೇ ಸ್ಥಾನ ಪಡೆದು ಪಾಯಿಂಟ್ ಗಿಟ್ಟಿಸಲು ವಿಫಲರಾದರು. ಫೋರ್ಸ್ ಇಂಡಿಯಾ ತಂಡ ಒಟ್ಟು 89 ಪಾಯಿಂಟ್‌ಗಳೊಂದಿಗೆ ಏಳನೇ ಸ್ಥಾನದಲ್ಲಿದೆ.ವೆಟೆಲ್‌ಗೆ ಅಗ್ರಸ್ಥಾನ: ರೆಡ್‌ಬುಲ್ ತಂಡದ ಸೆಬಾಸ್ಟಿಯನ್ ವೆಟೆಲ್ ಈ ರೇಸ್ ಗೆದ್ದುಕೊಂಡರು. ಇದೇ ತಂಡದ ಮಾರ್ಕ್ ವೆಬೆರ್‌ಎರಡನೇ ಸ್ಥಾನ ಪಡೆದರೆ, ಫೆರಾರಿ ತಂಡದ ಫೆರ್ನಾಂಡೊ ಅನೊಲ್ಸೊ ಮೂರನೆಯವರಾಗಿ ಸ್ಪರ್ಧೆ ಕೊನೆಗೊಳಿಸಿದರು.ಈ ಗೆಲುವಿನ ಮೂಲಕ ವೆಟೆಲ್ (215 ಪಾಯಿಂಟ್) ಫೆರಾರಿ ತಂಡದ ಅಲೊನ್ಸೊ (209) ಅವರನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ್ದಾರೆ. ಫೋರ್ಸ್ ಇಂಡಿಯಾ ತೊರೆಯಲಿರುವ ಹಕೆನ್‌ಬರ್ಗ್? (ಐಎಎನ್‌ಎಸ್): ಪ್ರಸಕ್ತ ಋತುವಿನಲ್ಲಿ ಉತ್ತಮ ಪ್ರದರ್ಶನ ನೀಡಿರುವ ಹಕೆನ್‌ಬರ್ಗ್ 2013 ರಲ್ಲಿ ಸೌಬೆರ್ ತಂಡವನ್ನು ಸೇರಲಿದ್ದಾರೆ ಎಂದು ಬಿಸಿಸಿ ವರದಿ ಮಾಡಿದೆ. `ಸೌಬೆರ್ ಈ ಬಗ್ಗೆ ಅಧಿಕೃತವಾಗಿ ಏನನ್ನೂ ಹೇಳಿಲ್ಲ. ಆದರೆ ಹಕೆನ್‌ಬರ್ಗ್ ಜೊತೆ ಮಾತುಕತೆ ನಡೆದಿದೆ~ ಎಂದು ವರದಿ ತಿಳಿಸಿದೆ. ಈ ಹಿಂದೆ ಫೋರ್ಸ್ ಇಂಡಿಯಾ ತಂಡದಲ್ಲಿದ್ದ ಅಡ್ರಿಯಾನ್ ಸುಟಿಲ್ ಅವರು ಹಕೆನ್‌ಬರ್ಗ್ ಸ್ಥಾನವನ್ನು ತುಂಬಲಿದ್ದಾರೆ ಎಂಬ ಮಾತುಗಳೂ ಕೇಳಿಬರುತ್ತಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry