ಫಾರ್ಮುಲಾ ಒನ್: ಹ್ಯಾಮಿಲ್ಟನ್‌ಗೆ `ಪೋಲ್ ಪೊಸಿಷನ್'

ಮಂಗಳವಾರ, ಜೂಲೈ 23, 2019
25 °C

ಫಾರ್ಮುಲಾ ಒನ್: ಹ್ಯಾಮಿಲ್ಟನ್‌ಗೆ `ಪೋಲ್ ಪೊಸಿಷನ್'

Published:
Updated:

ನರ್ಬರ್‌ಗ್ರಿಂಗ್ (ಪಿಟಿಐ): ಮರ್ಸಿಡಿಸ್ ತಂಡದ ಲೂಯಿಸ್ ಹ್ಯಾಮಿಲ್ಟನ್ ಜರ್ಮನ್ ಫಾರ್ಮುಲಾ ಒನ್ ಗ್ರಾನ್ ಪ್ರಿ ರೇಸ್ ಅರ್ಹತಾ ಸುತ್ತಿನಲ್ಲಿ ಅಗ್ರಸ್ಥಾನ ಪಡೆದರು. ಈ ಮೂಲಕ ಭಾನುವಾರ ನಡೆಯುವ ಸ್ಪರ್ಧೆಯಲ್ಲಿ ಅವರು `ಪೋಲ್ ಪೊಸಿಷನ್'ನಿಂದ ಸ್ಪರ್ಧೆ ಆರಂಭಿಸುವರು.ರೆಡ್ ಬುಲ್‌ನ ಸೆಬಾಸ್ಟಿಯನ್ ವೆಟೆಲ್ ಮತ್ತು ಮಾರ್ಕ್ ವೆಬ್ಬರ್ ಕ್ರಮವಾಗಿ ಎರಡು ಹಾಗೂ ಮೂರನೆಯವರಾಗಿ ಸ್ಪರ್ಧೆ ಆರಂಭಿಸುವರು. ಸಹಾರಾ ಪೋರ್ಸ್ ಇಂಡಿಯಾದ ಚಾಲಕ ಪಾಲ್ ಡಿ ರೆಸ್ಟಾ ಮತ್ತು ಅಡ್ರಿಯಾನ್ ಸುಟಿಲ್ ಅರ್ಹತಾ ಹಂತದಲ್ಲಿ ಪ್ರಭಾವಿ ಪ್ರದರ್ಶನ ನೀಡಲು ವಿಫಲವಾದರು. ಇವರು ಕ್ರಮವಾಗಿ 12 ಹಾಗೂ 15ನೆಯವರಾಗಿ ರೇಸ್ ಆರಂಭಿಸುವರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry