ಶುಕ್ರವಾರ, ಏಪ್ರಿಲ್ 23, 2021
22 °C

ಫಾರ್ಮ್‌ಹೌಸ್ ಸ್ವಾಧೀನ ಯತ್ನವೇ ಛಡ್ಡಾ ಹತ್ಯೆಗೆ ಕಾರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಒಡೆತನ ಇತ್ಯರ್ಥವಾಗದಿದ್ದ ಫಾರ್ಮ್‌ಹೌಸ್‌ನ್ನು  ಪಾಂಟಿ ಛಡ್ಡಾ ಅವರು ಸ್ವಾಧೀನ ಪಡಿಸಿಕೊಳ್ಳಲು ಯತ್ನಿಸಿದ್ದೇ ಛಡ್ಡಾ ಸಹೋದರರ ನಡುವಿನ ಗುಂಡಿನ ಕಾಳಗಕ್ಕೆ ಕಾರಣ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ. ಛತ್ರಪುರದಲ್ಲಿರುವ ಫಾರ್ಮ್‌ಹೌಸ್‌ನಲ್ಲಿ ನಡೆದಿದ್ದ ಮದ್ಯದ ದೊರೆ ಪಾಂಟಿ ಛಡ್ಡಾ ಹಾಗೂ ಅವರ ತಮ್ಮ ಹರ್ದೀಪ್ ಛಡ್ಡಾ ಹತ್ಯೆ ಪ್ರಕರಣ ಸಂಬಂಧ ಎರಡು ಪ್ರಕರಣಗಳನ್ನು ದಾಖಲಿಸಿರುವ ಪೊಲೀಸರು 15 ಜನರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ.ಘಟನೆ ಸಂಬಂಧ ಇದುವರೆಗೆ ಯಾರನ್ನೂ ಬಂಧಿಸಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಹರ್ದೀಪ್ ಅವರು ಇಲ್ಲದ ಸಂದರ್ಭದಲ್ಲಿ ಫಾರ್ಮ್‌ಹೌಸ್‌ಗೆ ಪಾಂಟಿ ಅವರು ಬೀಗ ಹಾಕಲು ಯತ್ನಿಸಿದ್ದು ಈ ಕಲಹಕ್ಕೆ ಕಾರಣ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.