ಫಾರ್ಮ್ ಕಂಡುಕೊಳ್ಳುವೆ: ಉಸೇನ್ ವಿಶ್ವಾಸದ ನುಡಿ

ಸೋಮವಾರ, ಜೂಲೈ 22, 2019
27 °C

ಫಾರ್ಮ್ ಕಂಡುಕೊಳ್ಳುವೆ: ಉಸೇನ್ ವಿಶ್ವಾಸದ ನುಡಿ

Published:
Updated:

ಕಿಂಗ್ಸ್‌ಟನ್ (ಐಎಎನ್‌ಎಸ್/ ಸಿಎಂಎಸ್): ಮೂರು ದಿನಗಳ ಅವಧಿಯಲ್ಲಿ ಎರಡು ಸಲ ಹಿನ್ನಡೆ ಅನುಭವಿಸಿದರೂ ಜಮೈಕದ ಉಸೇನ್ ಬೋಲ್ಟ್ ಮಾತ್ರ ಎದೆಗುಂದಿಲ್ಲ. ಲಂಡನ್ ಒಲಿಂಪಿಕ್ಸ್ ವೇಳೆಗೆ ಫಾರ್ಮ್‌ಗೆ ಮರಳುವ ವಿಶ್ವಾಸವನ್ನು ಈ ಓಟಗಾರ ವ್ಯಕ್ತಪಡಿಸಿದ್ದಾರೆ.`ನಾನು ಒಲಿಂಪಿಕ್ ಚಾಂಪಿಯನ್. ನಾನು ಶ್ರೇಷ್ಠ ಓಟಗಾರ ಎಂಬುದನ್ನು ಜಗತ್ತಿನ ಮುಂದೆ ಸಾಬೀತುಪಡಿಸಬೇಕಿದೆ. ಪುಟಿದೆದ್ದು ನಿಲ್ಲುವ ಸಾಮರ್ಥ್ಯ ನನಗಿದೆ~ ಎಂದು 100 ಮೀ. ಓಟದಲ್ಲಿ ವಿಶ್ವದಾಖಲೆ ಹೊಂದಿರುವ ಬೋಲ್ಟ್ ನುಡಿದಿದ್ದಾರೆ.`ನನ್ನ ಸಾಮರ್ಥ್ಯ ಕುಗ್ಗಿದೆ ಎಂದು ಭಾವಿಸುವುದು ಸರಿಯಲ್ಲ. ಮತ್ತೆ ಫಾರ್ಮ್‌ಗೆ ಮರಳಲು ಏನು ಮಾಡಬೇಕೆಂಬುದು ನನಗೆ ತಿಳಿದಿದೆ~ ಎಂದಿದ್ದಾರೆ. ಜಮೈಕದವರೇ ಆದ ಯೋಹಾನ್ ಬ್ಲೇಕ್ ಇತ್ತೀಚೆಗೆ 100 ಮೀ. ಹಾಗೂ 200 ಮೀ. ಓಟದಲ್ಲಿ ಬೋಲ್ಟ್‌ಗೆ ಆಘಾತ ನೀಡಿದ್ದರು.ಕಳೆದ ಶುಕ್ರವಾರ ನಡೆದ 100 ಮೀ. ಓಟದ ಸ್ಪರ್ಧೆಯಲ್ಲಿ ಬ್ಲೇಕ್ 9.75 ಸೆಕೆಂಡ್‌ಗಳೊಂದಿಗೆ ಅಗ್ರಸ್ಥಾನ ಪಡೆದಿದ್ದರು. 9.86 ಸೆಕೆಂಡ್‌ಗಳೊಂದಿಗೆ ಸ್ಪರ್ಧೆ ಕೊನೆಗೊಳಿಸಿದ್ದ ಬೋಲ್ಟ್‌ಗೆ ಎರಡನೇ ಸ್ಥಾನ ಲಭಿಸಿತ್ತು. ಅದೇ ರೀತಿ ಭಾನುವಾರ ನಡೆದ 200 ಮೀ. ಓಟದಲ್ಲೂ ಬ್ಲೇಕ್ ಅವರು ವಿಶ್ವದ ಅತಿವೇಗದ ಓಟಗಾರನನ್ನು ಎರಡನೇ ಸ್ಥಾನಕ್ಕೆ ತಳ್ಳಿದ್ದರು.ಬ್ಲೇಕ್ 19.80 ಸೆಕೆಂಡ್‌ಗಳಲ್ಲಿ ಗುರಿ ತಲುಪಿದ್ದರೆ, ಬೋಲ್ಟ್ 19.83 ಸೆ. ಗಳನ್ನು ತೆಗೆದುಕೊಂಡಿದ್ದರು. ಬೋಲ್ಟ್ ಅವರು ಲಂಡನ್‌ನಲ್ಲಿ ಚಿನ್ನ ಗೆಲ್ಲುವ `ಫೇವರಿಟ್~ ಎನಿಸಿಕೊಂಡಿದ್ದಾರೆ. ಆದರೆ ಜುಲೈ 27 ರಿಂದ ಆಗಸ್ಟ್ 12ರ ವರೆಗೆ ನಡೆಯುವ ಕೂಟದಲ್ಲಿ ಅಚ್ಚರಿಯ ಫಲಿತಾಂಶ ನೀಡುವಂತಹ ಸಾಮರ್ಥ್ಯ ಬ್ಲೇಕ್ ಹೊಂದಿದ್ದಾರೆ ಎಂಬುದು ಕ್ರೀಡಾ ಪಂಡಿತರ ಲೆಕ್ಕಾಚಾರ.2008ರ ಬೀಜಿಂಗ್ ಒಲಿಂಪಿಕ್ ಕೂಟದ 100 ಮತ್ತು 200 ಮೀ. ಓಟದಲ್ಲಿ ಚಿನ್ನ ಜಯಿಸಿದ್ದ ಬೋಲ್ಟ್ ಲಂಡನ್ ಒಲಿಂಪಿಕ್ಸ್‌ನಲ್ಲೂ ಇದೇ ಸಾಧನೆಯನ್ನು ಪುನರಾವರ್ತಿಸುವ ವಿಶ್ವಾಸದಲ್ಲಿದ್ದಾರೆ.ಬೋಲ್ಟ್ ಉತ್ತಮ

ಪ್ಯಾರಿಸ್ (ಎಎಫ್‌ಪಿ):
ಯೇಹಾನ್ ಬ್ಲೇಕ್ ಜಮೈಕಾದ ಒಲಿಂಪಿಕ್ ಟ್ರಯಲ್ಸ್‌ನಲ್ಲಿ ಎರಡು ವೇಗದ ಓಟದ ಸ್ಪರ್ಧೆಗಳಲ್ಲಿ ಗೆದ್ದಿದ್ದರೂ ಬೋಲ್ಟ್‌ಗೆ ತಕ್ಕ ಸ್ಪರ್ಧಿ ಆಗಲಾರ ಎನ್ನುವುದು ವಿಶ್ವ ಖ್ಯಾತ ಮಾಜಿ ಅಥ್ಲೀಟ್ ಮೈಕಲ್ ಜಾನ್ಸನ್ ಅಭಿಪ್ರಾಯ.`ಬೋಲ್ಟ್ ತಮ್ಮ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ನೀಡದ ಸಂದರ್ಭದಲ್ಲಿ ಬ್ಲೇಕ್ ಮಿಂಚಿದ್ದಾರೆ. ಆದರೂ ಉಸೇನ್‌ಗೆ ಸವಾಲಾಗುವ ಸ್ಪರ್ಧಿಯೊಬ್ಬ ಈಗ ಕಾಣಿಸಿಕೊಂಡಿದ್ದಾನೆ ಎನ್ನುವುದಂತೂ ನಿಜ. ಈ ಅಂಶವನ್ನು ಒಪ್ಪಲೇಬೇಕು. ಇಂಥ ಸಂದರ್ಭದಲ್ಲಿ ಬೋಲ್ಟ್ ಮೇಲೆ ಒತ್ತಡ ಹೆಚ್ಚಿದೆ. ಅವರು ಲಂಡನ್‌ನಲ್ಲಿ ಪ್ರದರ್ಶನ ಮಟ್ಟ ಹೆಚ್ಚಿಸಿಕೊಳ್ಳಲೇಬೇಕು~ ಎಂದು ಸುದ್ದಿ ಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry