ಶುಕ್ರವಾರ, ಜೂನ್ 18, 2021
24 °C

ಫಿಟ್‌ನೆಸ್‌ಗೆ ಆದ್ಯತೆ: ಮೈಕೆಲ್ ನಾಬ್ಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿರುವ ಭಾರತ ಹಾಕಿ ತಂಡದ ಆಟಗಾರರು ಲಂಡನ್‌ಗೆ ಪ್ರಯಾಣ ಬೆಳಸಬೇಕಾದರೆ, ಕಡ್ಡಾಯವಾಗಿ ಫಿಟ್‌ನೆಸ್ ಕಾಪಾಡಿಕೊಳ್ಳಬೇಕು. ಇದೇ ಆಧಾರದ ಮೇಲೆ ತಂಡವನ್ನು ಆಯ್ಕೆ ಮಾಡಲಾಗುವುದು ಎಂದು ಕೋಚ್ ಮೈಕೆಲ್ ನಾಬ್ಸ್ ಸ್ಪಷ್ಟವಾಗಿ ಹೇಳಿದ್ದಾರೆ.ನಗರದ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ (ಎಸ್‌ಎಐ) ಭಾರತ ಹಾಕಿ ತಂಡ ಶಿಬಿರದಲ್ಲಿ ತೊಡಗಿದೆ. ಸೋಮವಾರ ಮಾಧ್ಯಮದವರ ಜೊತೆ ಮಾತನಾಡಿದ ನಾಬ್ಸ್ ಹೇಳಿದ್ದಿಷ್ಟು.ಒಲಿಂಪಿಕ್ಸ್‌ನಲ್ಲಿ ಆಡುವ ಮುನ್ನ ಭಾರತ ಮೇ 2ರಿಂದ 6ರ ವರೆಗೆ ನಾಲ್ಕು ರಾಷ್ಟ್ರಗಳು ಒಳಗೊಂಡ ಟೆಸ್ಟ್ ಸರಣಿಯಲ್ಲಿ ಆಡಲಿದೆ.`ಭಾರತ ತಂಡದ ರಕ್ಷಣಾ ವಿಭಾಗ ಮೊದಲಿಗಿಂತಲೂ ಈಗ ಸುಧಾರಣೆ ಕಂಡಿದೆ. ಈ ಕುರಿತು ನನಗೆ ತೃಪ್ತಿ ಇದೆ~ ಎಂದು . ಡ್ರ್ಯಾಗ್ ಫ್ಲಿಕ್ ಪರಿಣಿತರಾದ ಸಂದೀಪ್ ಸಿಂಗ್ ಹಾಗೂ ಆರ್.ವಿ. ರಘುನಾಥ್ ಉತ್ತಮವಾಗಿ ಸಜ್ಜುಗೊಳ್ಳುತ್ತಿದ್ದಾರೆ. ಇನ್ನೂ ಸಾಕಷ್ಟು ಅಭ್ಯಾಸ ನಡೆಸಬೇಕು~ ಎಂದು ನಾಬ್ಸ್  ಹೇಳಿದರು.ಗಾಯಗೊಂಡಿದ್ದ ಗುರ್ಬಜ್ ಸಿಂಗ್ ಈಗ ಸುಧಾರಿಸಿಕೊಂಡಿದ್ದಾರೆ.ಒಲಿಂಪಿಕ್ಸ್ ಅರ್ಹತಾ ಸುತ್ತಿನಲ್ಲಿ ಫೈನಲ್ ಸೇರಿದಂತೆ ಆರು ಪಂದ್ಯಗಳನ್ನು ಆಡಿರುವ ಭಾರತ ಒಟ್ಟು 44 ಗೋಲುಗಳನ್ನು ಗಳಿಸಿದೆ. ಟೆಸ್ಟ್ ಸರಣಿಯಲ್ಲಿ ಉಳಿದ ದೇಶಗಳು ಭಾರತಕ್ಕೆ ಪ್ರಬಲ ಪೈಪೋಟಿಯನ್ನು ಒಡ್ಡಲಿವೆ ಎಂದು ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.