ಫಿಟ್‌ನೆಸ್‌ನತ್ತ ಮನಿಷಾ ಚಿತ್ತ

7

ಫಿಟ್‌ನೆಸ್‌ನತ್ತ ಮನಿಷಾ ಚಿತ್ತ

Published:
Updated:
ಫಿಟ್‌ನೆಸ್‌ನತ್ತ ಮನಿಷಾ ಚಿತ್ತ

ಇತ್ತೀಚೆಗಷ್ಟೇ ಗರ್ಭಕೋಶದ ಕ್ಯಾನ್ಸರ್‌ಗೆ ತುತ್ತಾಗಿ ಚಿಕಿತ್ಸೆ ಪಡೆದು ಗುಣಮುಖರಾದ ಬಾಲಿವುಡ್ ನಟಿ ಮನಿಷಾ ಕೊಯಿರಾಲಾ ತಮ್ಮ ತಂದೆ ಪ್ರಕಾಶ್ ಕೊಯಿರಾಲ ಅವರ ಸಲಹೆಯಂತೆ ಮತ್ತೆ  ಫಿಟ್‌ನೆಸ್‌ನತ್ತ ಚಿತ್ತ ಹರಿಸಿದ್ದಾರಂತೆ.`ಪ್ರತಿದಿನ ಎಂಟರಿಂದ ಹನ್ನೆರಡು ಕಿಲೋಮೀಟರ್ ವಾಕಿಂಗ್ ಮಾಡುವಂತೆ ಅಪ್ಪ ಹೇಳಿದ್ದಾರೆ. ನಾನು ಅಪ್ಪನ ಮಾತನ್ನು ತಪ್ಪದೇ ಪಾಲಿಸುತ್ತಿದ್ದೇನೆ' ಎಂದು ಮನಿಷಾ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.`ಇದರ ಜೊತೆಗೆ ಒಂದು ಗಂಟೆ ಪ್ರಾಣಾಯಾಮ ಮಾಡುತ್ತೇನೆ. ಮಲಗುವ ಮುಂಚೆ ಓಶೋ ಅವರ ಕುಂಡಲಿನಿ ಧ್ಯಾನ ಮಾಡುತ್ತೇನೆ. ಇವುಗಳ ಮಧ್ಯೆ ಆಯುರ್ವೇದ ಮಸಾಜ್ ಟ್ರೀಟ್‌ಮೆಂಟ್ ಕೂಡ ಮಾಡಿಸಿಕೊಳ್ಳುತ್ತಿದ್ದೇನೆ' ಎಂದೂ ಅವರು ಬರೆದುಕೊಂಡ್ದ್ದಿದಾರೆ.ಇದೆಲ್ಲ ನನ್ನ ಪ್ರಾಜೆಕ್ಟ್‌ನ ಭಾಗ ಎಂದಿರುವ 42ರ ಮನಿಷಾ `ಬಾಂಬೆ', `1942- ಎ ಲವ್ ಸ್ಟೋರಿ' ಮತ್ತು `ದಿಲ್ ಸೆ' ಚಿತ್ರಗಳ ಮೂಲಕ ಬಾಲಿವುಡ್‌ನಲ್ಲಿ ಛಾಪು ಮೂಡಿಸಿದ್ದಾರೆ.ಕಳೆದ ವರ್ಷ ನವಂಬರ್‌ನಲ್ಲಿ ಅವರಿಗೆ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. ನಂತರ ಅವರು ಅಮೆರಿಕದಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿ ಗುಣಮುಖರಾಗಿದ್ದರು. ಆರು ತಿಂಗಳ ವಿಶ್ರಾಂತಿಯ ನಂತರ ಮನಿಷಾ ಇನ್ನಷ್ಟು ಸುಂದರವಾಗಿ ಕಾಣಿಸಿಕೊಂಡಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry