ಫಿಟ್‌ನೆಸ್ ಸಾಬೀತು ಪಡಿಸಲು ಹಸ್ಸಿ ಸಿದ್ಧ

7

ಫಿಟ್‌ನೆಸ್ ಸಾಬೀತು ಪಡಿಸಲು ಹಸ್ಸಿ ಸಿದ್ಧ

Published:
Updated:

ಮೆಲ್ಬರ್ನ್ (ಪಿಟಿಐ): ವಿಶ್ವಕಪ್ ಟೂರ್ನಿಯಲ್ಲಿ ಆಡುತ್ತಿರುವ ಆಸ್ಟ್ರೇಲಿಯ ತಂಡದಿಂದ ತಮ್ಮನ್ನು ಕೈಬಿಟ್ಟಿದ್ದನ್ನು ತೀವ್ರ ಆಕ್ಷೇಪಿಸಿರುವ ಆಸೀಸ್ ಬ್ಯಾಟ್ಸ್‌ಮನ್ ಮೈಕೆಲ್ ಹಸ್ಸಿ, ನನ್ನ ಫಿಟ್‌ನೆಸ್ ಸಾಬೀತು ಮಾಡುತ್ತೇನೆ ಎಂದು ಸವಾಲು ಹಾಕಿದ್ದಾರೆ.ಸುಮಾರು ಒಂದು ತಿಂಗಳ  ಹಿಂದೆ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಮೊಣಕಾಲಿನ ಗಾಯಕ್ಕೆ ಒಳಗಾಗಿದ್ದರು.  ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಹಸ್ಸಿಯನ್ನು ಆಸ್ಟ್ರೇಲಿಯ ತಂಡದಿಂದ ಹೊರಗಿಟ್ಟಿತ್ತು.  ಇದೀಗ ತಮ್ಮ ಫಿಟ್‌ನೆಸ್  ಸಾಬೀತು ಮಾಡುವುದಾಗಿ ‘ಡೇಲಿ ಟೆಲಿಗ್ರಾಫ್’ನ ಸಂದರ್ಶನದಲ್ಲಿ ತಿಳಿಸಿದ್ದಾರೆ.ವಿಶ್ವಕಪ್ ಟೂರ್ನಿಯಲ್ಲಿ ಎರಡನೇ ಪಂದ್ಯದಲ್ಲಿ ಆಡಲು ಫಿಟ್ ಆಗುವುದಾಗಿ ಬಲಗೈ ಬ್ಯಾಟ್ಸ್‌ಮನ್ ಹಸ್ಸಿ  ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಈ ಮಧ್ಯೆ ಮಾಜಿ ಕ್ರಿಕೆಟ್ ಆಟಗಾರ ಗ್ರೇಗ್ ಚಾಪೆಲ್ ಹಸ್ಸಿಯನ್ನು ಭೇಟಿಯಾಗಿ, ನಿವೃತ್ತಿ ಪಡೆಯುವಂತೆ ಹೇಳಿದ್ದರು ಎಂದು ವರದಿಯಾಗಿತ್ತು. ಆದರೆ ಇದನ್ನು ಚಾಪೆಲ್ ನಿರಾಕರಿಸಿದ್ದಾರೆ.‘ಕ್ರಿಕೆಟ್ ಆಸ್ಟ್ರೇಲಿಯದ ವೈದ್ಯಕೀಯ ಮಂಡಳಿಯ ಸಲಹೆಯ ಮೇರೆ ಆಯ್ಕೆಗಾರರು ಈ ನಿರ್ಧಾರ ಕೈಗೊಂಡಿದ್ದಾರೆ. ಸದ್ಯ ನಡೆಯುತ್ತಿರುವ ವಿಶ್ವಕಪ್ ಟೂರ್ನಿಯಲಿ ಆಸೀಸ್ ತಂಡಕ್ಕೆ ಮರುಆಯ್ಕೆಗೊಂಡು ಹಸ್ಸಿ ತೆರಳುವುದರ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ. ಇದಕ್ಕಾಗಿ ಮತ್ತೊಬ್ಬ ಆಟಗಾರನನ್ನು ಹೊರಗಿಡಬೇಕಾಗುತ್ತದೆ. ಈ ಹಂತದಲ್ಲಿ ಇದರ ಬಗ್ಗೆ ಇನ್ನೂ ಯೋಚಿಸಿಲ್ಲ’ ಎಂದರು.ಕೇಳಿದ ಮಾತು


ಆತಂಕ ಬೇಡ; ಸಂತೋಷವಾಗಿರಿ. ಬಲಾಢ್ಯ ತಂಡವೊಂದರ ವಿರುದ್ಧದ ಸೋಲಿಗೆ ನಿರಾಸೆಗೊಂಡು ತಲೆಚಚ್ಚಿಕೊಳ್ಳಬೇಡಿ.

-ಜಿಂಬಾಬ್ವೆ ಮಾಧ್ಯಮಗಳು

ಬ್ಯಾಟಿಂಗ್ ವಿಭಾಗದಲ್ಲಿನ ಸಮಸ್ಯೆಯು ತಂಡಕ್ಕೆ ಅಪಾಯಕಾರಿ ಆಯಿತು. ನಮ್ಮ ಬ್ಯಾಟ್ಸ್‌ಮನ್‌ಗಳು ಇನ್ನಷ್ಟು ಪ್ರಗತಿ ಸಾಧಿಸಬೇಕು.

-ಎಲ್ಟಾನ್ ಚಿಗುಂಬುರಾ, ಜಿಂಬಾಬ್ವೆ ತಂಡದ ನಾಯಕ

ವಿಶ್ವಕಪ್ ಫೈನಲ್ ಪಂದ್ಯಕ್ಕೆ ಟಿಕೆಟ್ ಪಡೆಯುವಾಗ ಸೋಮವಾರ ವೆಬ್‌ಸೈಟ್ ‘ಕ್ರ್ಯಾಷ್’ ಆದ್ದರಿಂದ ಇನ್ನು ಮುಂದೆ ಲಾಟರಿ ಮೂಲಕ ಟಿಕೆಟ್ ನೀಡುವ ವ್ಯವಸ್ಥೆ ಮಾಡಲಾಗುವುದು.

-ರತ್ನಾಕರ ಶೆಟ್ಟಿ, ಟೂರ್ನಿಯ ನಿರ್ದೇಶಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry