ಸೋಮವಾರ, ಏಪ್ರಿಲ್ 12, 2021
26 °C

ಫಿಡೆ ರೇಟೆಡ್ ಚೆಸ್: ಶ್ರೇಯಾಂಕ ಆಟಗಾರರ ಮುನ್ನಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ದೇಶದ ಸ್ವಾತಂತ್ರ್ಯೋತ್ಸವದ ದಿನ, ಇಬ್ಬರು ವಿದೇಶಿ ಚೆಸ್ ಆಟಗಾರರ ಪಾಲಿಗೆ ಸುದಿನವೆನಿಸಲಿಲ್ಲ. ಇರಾನಿನ ಆಟಗಾರ ವ್ಯಾಸಿಲಿ ಆರಿಫ್, ಬುಧವಾರ ಆರಂಭವಾದ 2ನೇ ಯುಕೆಸಿಎ ಕಪ್ ಅಖಿಲ ಭಾರತ ಫಿಡೆ ರೇಟೆಡ್ ಓಪನ್ ಚೆಸ್ ಚಾಂಪಿಯನ್‌ಷಿಪ್‌ನ ಮೊದಲ ಸುತ್ತಿನಲ್ಲಿ ತಮಗಿಂತ ಕೆಳಕ್ರಮಾಂಕದ  ಗೋವಾದ ಆಟಗಾರ್ತಿ ಸ್ವೇರಾ ಆನಾ ಬ್ರಗಾಂಝಾ ಎದುರು ಮಣಿದರು.



ಕಪ್ಪು ಕಾಯಿಗಳಲ್ಲಿ ಆಡಿದ್ದ ಅನುಭವಿ ವ್ಯಾಸಿಲಿ ಆರಿಫ್ (ರೇಟಿಂಗ್ 2139) 18ನೇ ಬೋರ್ಡ್‌ನಲ್ಲಿ ಸಂಯಮದಿಂದ ಆಡಿದ ಸ್ವೇರಾ (1373) ಸೋತರೆ, ಅವರಿಗಿಂತ ಕೆಳಕ್ರಮಾಂಕದಲ್ಲಿರುವ ಕೆನಡದ ಆಟಗಾರ ನಿಕೋಲಸ್ ಷಿಫಾಟ್, ಧಾರವಾಡದ ಪ್ರತಿಭಾನ್ವಿತ ಅಕ್ಷಯ್ ವಿ.ಹಲಗಣ್ಣವರ ಅವರಿಗೆ ಶರಣಾದರು.



ಕೊಡಿಯಾಲಬೈಲ್‌ನ ಸುಬ್ರಹ್ಮಣ್ಯ ಸಭಾದಲ್ಲಿ, ಯುನೈಟೆಡ್ ಕರ್ನಾಟಕ ಚೆಸ್ ಸಂಸ್ಥೆ ಆಶ್ರಯದಲ್ಲಿ ನಡೆಯುತ್ತಿರುವ ಈ ಟೂರ್ನಿ ಒಟ್ಟು 9 ಸುತ್ತುಗಳನ್ನು ಹೊಂದಿದೆ. ದೇಶದ ವಿವಿಧ ಕಡೆಗಳಿಂದ ಒಟ್ಟು 188 ಮಂದಿ ಭಾಗವಹಿಸುತ್ತಿದ್ದು ಇವರಲ್ಲಿ 127 ಮಂದಿ ರೇಟಿಂಗ್ ಯಾದಿಯಲ್ಲಿದ್ದಾರೆ. ಇಂಟರ್‌ನ್ಯಾಷನಲ್ ಮಾಸ್ಟರ್‌ಗಳಾದ- ಚೆನ್ನೈನ ಟಿ.ಎಸ್.ರವಿ (ಅಗ್ರ ಶ್ರೇಯಾಂಕ) ಮತ್ತು ದಕ್ಷಿಣ ರೈಲ್ವೆಯ ಡಿ.ಪಿ.ಸಿಂಗ್ (ಆರನೇ ಶ್ರೇಯಾಂಕ) ಇವರಲ್ಲಿ ಒಳಗೊಂಡಿದ್ದಾರೆ.



ಪ್ರಮುಖರ ಮುನ್ನಡೆ: ಸಣ್ಣಪುಟ್ಟ ಅನಿರೀಕ್ಷಿತಗಳನ್ನು ಬಿಟ್ಟರೆ ಉಳಿದಂತೆ ಪ್ರಮುಖ ಶ್ರೇಯಾಂಕ ಆಟಗಾರರು ಮೊದಲ ಸುತ್ತಿನಲ್ಲಿ ನಿರೀಕ್ಷಿತ ಮುನ್ನಡೆ ಸಾಧಿಸಿದರು. ಅಗ್ರ ಶ್ರೇಯಾಂಕದ ಟಿ.ಷಣ್ಮುಗಂ ರವಿ, ಮೊದಲ ಬೋರ್ಡ್‌ನಲ್ಲಿ ಸಚಿನ್ ಪ್ರದೀಪ್ (ಕೇರಳ) ವಿರುದ್ಧ ಜಯಗಳಿಸಿದರೆ, ಎರಡನೇ ಶ್ರೇಯಾಂಕದ ಕಾರ್ತಿಕೇಯನ್ ಮುರಳಿ (2323), ಸ್ಥಳೀಯ ಆಟಗಾರ ರಜತ್ ರಾವ್ ವಿರುದ್ಧ ಪೂರ್ಣ ಪಾಯಿಂಟ್ ಸಂಗ್ರಹಿಸಿದರು. ಪುಣೆಯ ಶಶಿಕಾಂತ್ ಕುತ್ವಾಲ್, ಕೇರಳದ ಪಿ.ಜಯಕೃಷ್ಣನ್ ವಿರುದ್ಧ ಗೆಲುವನ್ನು ಪಡೆದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.