ಫಿನ್ಲೆಂಡ್: ಭಾರತಿಯ ಖಾದ್ಯ ಬಲು ಇಷ್ಟ !

7

ಫಿನ್ಲೆಂಡ್: ಭಾರತಿಯ ಖಾದ್ಯ ಬಲು ಇಷ್ಟ !

Published:
Updated:
ಫಿನ್ಲೆಂಡ್: ಭಾರತಿಯ ಖಾದ್ಯ ಬಲು ಇಷ್ಟ !

ಹೆಲ್ಸಿಂಕಿ (ಐಎಎನ್‌ಎಸ್): ಸಾರಂಗದ ಮಾಂಸವನ್ನು ಚಪ್ಪರಿಸುವ ಫಿನ್ಲೆಂಡ್ ರಾಜಧಾನಿ ಹೆಲ್ಸಿಂಕಿಯಲ್ಲಿ ಈಗ ಭಾರತೀಯ ಖಾದ್ಯಗಳಿಗೆ ಬಲು ಬೇಡಿಕೆ.

ಪ್ರಸ್ತುತ ಅಲ್ಲಿ ಎರಡು ಡಜನ್‌ಗೂ ಹೆಚ್ಚು ಭಾರತೀಯ ರೆಸ್ಟೋರೆಂಟ್‌ಗಳು ಕಾರ್ಯನಿರ್ವಹಿಸುತ್ತಿವೆ.

ಈ ರೆಸ್ಟೋರೆಂಟ್‌ಗಳಲ್ಲಿ ಬಾಯಲ್ಲಿ ನೀರೂರಿಸುವ ಪಾಲಕ್ ಪನೀರ್, ಚೋಲೆ-ನಾನ್, ಕಡಿ-ಪಕೋಡಾ, ಬಟರ್ ಚಿಕನ್ ಮತ್ತಿತರ ಸ್ವಾದಭರಿತ ಆಹಾರ ಲಭ್ಯ.

ಫಿನ್ಲೆಂಡ್‌ನಲ್ಲಿ ಭಾರತೀಯ ಸ್ವಾದಿಷ್ಟ ಆಹಾರಗಳು ಸ್ಥಾನಪಡೆದಿದ್ದಾರೂ ಹೇಗೆ? ಇಲ್ಲಿನ ನಾಗರಿಕರು ಪಾಲಕ್ ಪನೀರ್‌ನಂತಹ ಖಾದ್ಯಕ್ಕೆ ಮಾರು ಹೋಗಿದ್ದು ಹೇಗೆ, ಏಕೆ? - ಪ್ರಶ್ನೆಗಳಿಗೆ ಬಾಂಗ್ಲಾದೇಶದ ರುಮನ್ ರೆಹಮಾನ್ ಹೀಗೆ ಉತ್ತರಿಸುತ್ತಾರೆ.

ಹೆಲ್ಸಿಂಕಿ ನಾಗರಿಕರಿಗೆ ಮೊದಲು ಭಾರತೀಯ ಆಹಾರಗಳ ರುಚಿ ತೋರಿಸಿದ್ದು, `ನಮಸ್ಕಾರ್~ ಎಂಬ ರೆಸ್ಟೋರೆಂಟ್. ಭಾರತೀಯರೊಬ್ಬರ ನೆರವಿನಿಂದ ಈ  ಉಪಾಹಾರ ಗೃಹ ಆರಂಭವಾಯಿತು. ಸ್ವಾದಿಷ್ಟವಾದ ಭಾರತೀಯ ಆಹಾರಗಳು ಇಲ್ಲಿ ಲಭ್ಯವಾಗತೊಡಗಿದವು. `ನಮಸ್ಕಾರ್~ ಯಶಸ್ಸನ್ನು ಕಂಡ ಅನೇಕರು ನಗರದ ವಿವಿಧೆಡೆ ಭಾರತೀಯ ಆಹಾರ ಸಿದ್ಧಪಡಿಸುವ ಹೋಟೆಲ್‌ಗಳನ್ನು ಆರಂಭಿಸಿದರು. ರೆಹಮಾನ್ ಸದ್ಯ `ನಮಸ್ಕಾರ್~ನಲ್ಲಿ ಕೆಲಸ ಮಾಡುತ್ತಿದ್ದಾರೆ. 

ಈ ನಗರದಲ್ಲಿ ಗಾಂಧಿ, ಮಹಾರಾಜ್, ಸಾಮ್ರಾಟ್, ಇಂಡಿಯನ್ ತಾಜ್ ಮತ್ತು ಮೌಂಟ್ ಎವರೆಸ್ಟ್ ಹೆಸರಿನಲ್ಲಿ ರೆಸ್ಟೋರೆಂಟ್‌ಗಳಿವೆ. ಇವುಗಳೆಲ್ಲವನ್ನು ನಡೆಸುತ್ತಿರುವವರು ನೇಪಾಳೀಯರು ಅಥವಾ ಬಾಂಗ್ಲಾದೇಶದವರು ಎನ್ನುವುದು ವಿಶೇಷ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry