ಮಂಗಳವಾರ, ನವೆಂಬರ್ 19, 2019
28 °C

ಫಿರಂಗಿ ಷೆಲ್ ಸ್ಫೋಟ: ಇಬ್ಬರ ಸಾವು

Published:
Updated:

ಆಗ್ರಾ (ಐಎಎನ್‌ಎಸ್): ಸೇನಾ ಪಡೆಗೆ ಸೇರಿದ ಫಿರಂಗಿಯ ಅವಧಿ ಮುಗಿದಿದ್ದ ಷೆಲ್ ಸ್ಫೋಟಗೊಂಡು ಇಬ್ಬರು ಮೃತಪಟ್ಟಿರುವ ಘಟನೆ ಆಗ್ರಾದ ಗೋಬರ್ ಚೌಕಿಯಲ್ಲಿ ಗುರುವಾರ ನಡೆದಿದೆ.ಗುಜರಿ ಅಂಗಡಿ ನಡೆಸುತ್ತಿದ್ದ ರಾಮ್ ನಿವಾಸ್ (26) ಮತ್ತು ಆತನ ಸಹಾಯಕ ಚೋಟು (20) ಮೃತಪಟ್ಟವರು. ಘಟನೆಯಲ್ಲಿ ರಾಮ್ ಅವರ ತಾಯಿ ಮಾಯಾದೇವಿ ಗಾಯಗೊಂಡಿದ್ದಾರೆ.`ಇದೊಂದು ಆಕಸ್ಮಿಕ ಘಟನೆ. ರಾಮ್ ತಮ್ಮ ಮನೆಯಲ್ಲಿ ಷೆಲ್‌ನಿಂದ ಹಿತ್ತಾಳೆಯನ್ನು ಬೇರ್ಪಡಿಸುತ್ತಿದ್ದ ವೇಳೆ  ಸ್ಫೋಟ ಸಂಭವಿಸಿದೆ. ಘಟನಾ ಸ್ಥಳದಲ್ಲಿ ದೊರೆತಿರುವ ಷೆಲ್ ತುಣುಕುಗಳ ಮಾದರಿಯನ್ನು ತನಿಖೆಗಾಗಿ ಸಂಗ್ರಹಿಸಲಾಗಿದ್ದು, ಸ್ಥಳೀಯ ಸೇನಾ ಅಧಿಕಾರಿಗಳಿಗೆ ಈ ಕುರಿತು ಮಾಹಿತಿ ನೀಡಲಾಗಿದೆ' ಎಂದು ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ  ಸುಭಾಷ್ ಚಂದ್ರ ದುಬೆ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)