ಫಿಲಾಟೆಲಿ ಸಣ್ಣ ವಿಶ್ವಕೋಶ: ಉದಯಕುಮಾರ್

7

ಫಿಲಾಟೆಲಿ ಸಣ್ಣ ವಿಶ್ವಕೋಶ: ಉದಯಕುಮಾರ್

Published:
Updated:
ಫಿಲಾಟೆಲಿ ಸಣ್ಣ ವಿಶ್ವಕೋಶ: ಉದಯಕುಮಾರ್

ಮಂಗಳೂರು: ಅಂಚೆಚೀಟಿ ಸಂಗ್ರಹಣೆ ಅತ್ಯುತ್ತಮ ಹವ್ಯಾಸವಾಗಿದ್ದು, ಇದನ್ನು ಸಣ್ಣ ವಿಶ್ವಕೋಶ ಎಂದು ಕರೆಯಬಹುದು ಎಂದು ಗೋಕರ್ಣನಾಥ ಬಿಇಡಿ ಕಾಲೇಜಿನ ಪ್ರಾಂಶುಪಾಲ ಉದಯಕುಮಾರ್ ತಿಳಿಸಿದರು.

ಉರ್ವದ ಕೆನರಾ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಅಂಚೆಚೀಟಿ ಸಂಘವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಸಂಘದ ಸಂಚಾಲಕಿ ರೇಣುಕಾ ಎಂ.ರಾವ್ ಮಾತನಾಡಿ, ಅಂಚೆ ಚೀಟಿ ಅಧ್ಯಯನದಿಂದ ವಿವಿಧ ದೇಶಗಳ ಭೌಗೋಳಿಕ, ಐತಿಹಾಸಿಕ ಮತ್ತು ನೈಸರ್ಗಿಕ ಜೀವನದ ಅಧ್ಯಯನದಲ್ಲೂ ಆಸಕ್ತಿ ಬೆಳೆಯುತ್ತದೆ ಎಂದು ಹೇಳಿದರು.ಮುಖ್ಯಶಿಕ್ಷಕ ಟಿ.ಜಿ.ಅಶೋಕ್ ಪಂಡಿತ್, ಸಂಘ ಅಧ್ಯಕ್ಷ ರಾಹುಲ್ ಕಾಮತ್, ಕಾರ್ಯದರ್ಶಿ ಪೃಥ್ವಿರಾಜ್ ಶಾಸ್ತ್ರಿ ಇದ್ದರು. ಅನುಷಾ ರಮ್ಯ, ಶಿವಾನಿ ಪ್ರಾರ್ಥಿಸಿದರು. ಎಸ್. ಹಿಮಾಂಶು ವಂದಿಸಿದರು. ಸೌರಭ ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry