ಫಿಲಿಪ್ಪೀನ್ಸ್‌ ಮೆಗನ್‌ಗೆ ವಿಶ್ವಸುಂದರಿ ಪಟ್ಟ

7

ಫಿಲಿಪ್ಪೀನ್ಸ್‌ ಮೆಗನ್‌ಗೆ ವಿಶ್ವಸುಂದರಿ ಪಟ್ಟ

Published:
Updated:
ಫಿಲಿಪ್ಪೀನ್ಸ್‌ ಮೆಗನ್‌ಗೆ ವಿಶ್ವಸುಂದರಿ ಪಟ್ಟ

ಬಾಲಿ (ಪಿಟಿಐ): ಫಿಲಿಪ್ಪೀನ್ಸ್‌ ಸುಂದರಿ  ಮೆಗನ್‌ ಯಂಗ್‌ ಅವರು 2013ನೇ ಸಾಲಿನ ವಿಶ್ವಸುಂದರಿಯಾಗಿ ಆಯ್ಕೆ­ಯಾ­ಗಿ­­ದ್ದಾರೆ. ಜಗತ್ತಿನ ವಿವಿಧ ರಾಷ್ಟ್ರಗಳ 130 ಸ್ಪರ್ಧಿಗಳನ್ನು ಹಿಂದಿಕ್ಕಿ 23 ವರ್ಷದ ಯಂಗ್‌ ಕಿರೀಟವನ್ನು ಮುಡಿ­ಗೇರಿಸಿ­­ಕೊಂಡಿದ್ದಾರೆ.ಮಿಸ್‌ ಫಿಲಿಪ್ಪೀನ್ಸ್ ಒಬ್ಬರು ವಿಶ್ವ­ಸುಂದರಿ­ಯಾಗಿ ಆಯ್ಕೆಯಾಗುತ್ತಿರು­ವುದು ಇದೇ ಮೊದಲು. ಇಂಡೊನೇಷ್ಯಾದ ಬಾಲಿಯಲ್ಲಿ ನಡೆದ  63ನೇ ವಿಶ್ವಸುಂದರಿ ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ಆಯ್ಕೆಯಾಗುತ್ತಿದ್ದಂತೆ ಮೆಗನ್‌ ಭಾವೋದ್ವೇಗಕ್ಕೆ ಒಳಗಾದರು.ಚಿತ್ರನಿರ್ಮಾಣ ವಿಷಯದಲ್ಲಿ ಅಧ್ಯಯನ ನಡೆಸುತ್ತಿರುವ 23 ವರ್ಷದ ಮೆಗನ್‌ ಯಂಗ್‌ ಅವರು 2012ನೇ ಸಾಲಿನ ವಿಶ್ವಸುಂದರಿ ಚೀನಾದ ವೆಂಕ್ಸಿಯಾ ಯು ಅವರಿಂದ  ಪಟ್ಟವನ್ನು ಪಡೆದಿದ್ದಾರೆ. ಭಾರತದಿಂದ ಸ್ಪರ್ಧಿಸಿದ್ದ ನವನೀತ್‌ ಕೌರ್‌ ಧಿಲ್ಲಾನ್‌ ಅವರು ಮೊದಲ ಹತ್ತು ಸುಂದರಿಯರ ಪಟ್ಟಿಯಲ್ಲಿ ಸ್ಥಾನ ಪಡೆಯಲೂ ವಿಫಲರಾದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry