ಫಿಲಿಪ್ಪೀನ್ಸ್: ರಕ್ಷಣಾ ಕಾರ್ಯಕ್ಕೆ ಅಡ್ಡಿ

7

ಫಿಲಿಪ್ಪೀನ್ಸ್: ರಕ್ಷಣಾ ಕಾರ್ಯಕ್ಕೆ ಅಡ್ಡಿ

Published:
Updated:

ಮನಿಲಾ (ಪಿಟಿಐ): ಫಿಲಿಪ್ಪೀನ್ಸ್‌ನಲ್ಲಿ ಭೂಕಂಪದ ಅವಶೇಷಗಳಡಿ ಸಿಲುಕಿಕೊಂಡಿರುವವರ ಪ್ರಾಣ ರಕ್ಷಣೆಗಾಗಿ ಹೋರಾಡುತ್ತಿರುವ ರಕ್ಷಣಾ ಕಾರ್ಯಕರ್ತರಿಗೆ ಮತ್ತೆ ಮತ್ತೆ ಸಂಭವಿಸುತ್ತಿರುವ ಭೂಕಂಪನಗಳು ಅಡ್ಡಿ ಉಂಟು ಮಾಡುತ್ತಿವೆ.ಫಿಲಿಪ್ಪೀನ್ಸ್‌ನ ಮಧ್ಯಭಾಗದಲ್ಲಿ ಸೋಮವಾರ ಸಂಭವಿಸಿದ 6.8ರಷ್ಟು ತೀವ್ರತೆಯ ಭೂಕಂಪದಿಂದ 40 ಜನ ಸಾವಿಗೀಡಾಗಿದ್ದರು. ಅಲ್ಲದೆ ಹಲವರು ಕಾಣೆಯಾಗಿದ್ದಾರೆ. ಆ ಬಳಿಕ ಮಂಗಳವಾರ ಮಧ್ಯಾಹ್ನದ ಹೊತ್ತಿಗೆ 1005 ಬಾರಿ ಭೂಮಿ ಕಂಪಿಸಿದೆ.ಭೂಕಂಪನದಿಂದ ಭೂಕುಸಿತ ಸಂಭವಿಸಿದ್ದು, ಫಿಲಿಪ್ಪೀನ್ಸ್‌ನ 3ನೇ ಬೃಹತ್ ದ್ವೀಪವಾದ ನೆಗ್ರೋಸ್‌ನ ಹಲವಾರು ಗುಡ್ಡಗಾಡು ಪ್ರದೇಶಗಳ ರಸ್ತೆಗಳು ಮುಚ್ಚಿಹೋಗಿವೆ.

ಅಧ್ಯಕ್ಷ ನಿನೋಯ್ ಅಖ್ವಿನೊ, ಶಾಂತಿ ಕಾಯ್ದುಕೊಳ್ಳುವಂತೆ ಜನರಲ್ಲಿ ಮನವಿ ಮಾಡಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry