ಫಿಲಿಪ್ಸ್: ಹೊಸ ಅಲ್ಟ್ರಾಸೌಂಡ್ ಉಪಕರಣ ಮಾರುಕಟ್ಟೆಗೆ

7

ಫಿಲಿಪ್ಸ್: ಹೊಸ ಅಲ್ಟ್ರಾಸೌಂಡ್ ಉಪಕರಣ ಮಾರುಕಟ್ಟೆಗೆ

Published:
Updated:

ಬೆಂಗಳೂರು: ಸುಧಾರಿತ ತಂತ್ರಜ್ಞಾನ ಮತ್ತು ಗರಿಷ್ಠ ಇಂಧನ ಕ್ಷಮತೆ ಹೊಂದಿರುವ ಹೊಸ ಅಲ್ಟ್ರಾಸೌಂಡ್ ಉಪಕರಣ `ಕ್ಲಿಯರ್ ವ್ಯೆ~ ಮತ್ತು `ಗ್ರೀನ್‌ಲೈನ್ ಸ್ಮಾರ್ಟ್~ ಎಲ್‌ಇಡಿ ಬೀದಿ ದೀಪ ಮಾದರಿಗಳನ್ನು `ಫಿಲಿಫ್ಸ್ ಇಂಡಿಯ~ ಶುಕ್ರವಾರ ಇಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.ಇಲ್ಲಿನ ಮಾನ್ಯತಾ ಟೆಕ್ನೊ        ಪಾರ್ಕ್‌ನಲ್ಲಿರುವ ಸಂಸ್ಥೆಯ ಸಂಶೋಧನೆ ಮತ್ತು ಅಭಿವೃದ್ಧಿ ಘಟಕದಲ್ಲಿ (ಪಿಐಸಿ) ಈ ಉಪಕರಣಗಳನ್ನು ಅಭಿವೃದ್ಧಿಪಡಿಸಲಾಗಿದೆ.ಭಾರತವೂ ಸೇರಿದಂತೆ ಜಾಗತಿಕ ಆರೋಗ್ಯ ಕ್ಷೇತ್ರದ ಮಾರುಕಟ್ಟೆಗೆ ಹೊಸ ಅಲ್ಟ್ರಾಸೌಂಡ್ ಉಪಕರಣ ಪೂರೈಸಲಾಗುವುದು. ಈಗಿರುವ ಉಪಕರಣಗಳಿಗೆ ಹೋಲಿಸಿದರೆ ಇದರ ಮೂಲಕ ಗರಿಷ್ಠ ಗುಣಮಟ್ಟದ ಚಿತ್ರ ಪಡೆಯಬಹುದು. ರೋಗ ಲಕ್ಷಣವನ್ನು ಕರಾರುವಕ್ಕಾಗಿ ಪತ್ತೆ ಹಚ್ಚಬಹುದು. ಈ ಯಂತ್ರ ಕೇವಲ 55 ಕೆ.ಜಿ ತೂಕ ಹೊಂದಿದ್ದು, ಆಸ್ಪತ್ರೆಗಳಲ್ಲಿ ವೈದ್ಯರು ಸುಲಭವಾಗಿ ಬಳಸುವಂತೆ ವಿನ್ಯಾಸಗೊಳಿಸಲಾಗಿದೆ ಎಂದು ಫಿಲಿಫ್ಸ್  ಎಲೆಕ್ಟ್ರಾನಿಕ್ಸ್ ಇಂಡಿಯ ಉಪಾಧ್ಯಕ್ಷ ರಾಜೀವ್ ಚೋಪ್ರಾ ಹೇಳಿದರು. `ಜನರ ಜೀವನಕ್ಕೆ ಹತ್ತಿರವಾದ  ತಂತ್ರಜ್ಞಾನ ಅಭಿವೃದ್ಧಿಪಡಿಸಲು ಸಂಸ್ಥೆ ಸದಾ ಬದ್ಧವಾಗಿದೆ~ ಎಂದು `ಪಿಐಸಿ~ ಘಟಕ ಮುಖ್ಯಸ್ಥ ವಿಡೊ ಮೆನ್ಹರ್ಟ್ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry