ಸೋಮವಾರ, ಜೂನ್ 14, 2021
26 °C

ಫಿಲ್ಟರ್ ಮರಳು ಘಟಕಗಳ ಮೇಲೆ ದಾಳಿ: ನಾಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕನಕಪುರ: ತಾಲ್ಲೂಕಿನ ಕಸಬಾ ಹೋಬಳಿಯ ಹುಲಿಬೆಲೆ ಹಾಗೂ ತಿಗಳರ ಹೊಸಹಳ್ಳಿಯ ಕೆರೆಗಳಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಫಿಲ್ಟರ್ ಮರಳು ಘಟಕಗಳ ಮೇಲೆ ತಹಶೀಲ್ದಾರ್ ದ್ರಾಕ್ಷಾಯಿಣಿ ನೇತೃತ್ವದ ಅಧಿಕಾರಿಗಳ ತಂಡ ಗುರುವಾರ ಸಂಜೆ ದಾಳಿ ನಡೆಸಿ ಮರಳು ತಯಾರಿಕೆಗೆ ಬಳಸುತ್ತಿದ್ದ ಸಾಧನ- ಸಲಕರಣೆಗಳನ್ನು ನಾಶಪಡಿಸಿದೆ.ಈ ಕೆರೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ 7 ಅಕ್ರಮ ಫಿಲ್ಟರ್ ಮರಳು ತಯಾರಿಕಾ ತೊಟ್ಟಿಗಳನ್ನು,  ಪೈಪ್‌ಗಳನ್ನು ನಾಶಪಡಿಸಿದೆ. ಅಕ್ರಮದಲ್ಲಿ ತೊಡಗಿದ್ದ ಘಟಕದ ಮಾಲೀಕರನ್ನು ಗುರುತಿಸಿ ಪ್ರಕರಣ ದಾಖಲಿಸಲಾಗಿದೆ.  ಹುಲಿಬೆಲೆ ಮತ್ತು ತಿಗಳರ ಹೊಸಹಳ್ಳಿ ವ್ಯಾಪ್ತಿಯ ಕೆರೆಗಳಲ್ಲಿ ಸುಮಾರು 30 ರಿಂದ 40 ಅಕ್ರಮ ಫಿಲ್ಟರ್ ಮರಳು ಘಟಕಗಳಿವೆ.

 

ಅವುಗಳನ್ನು  ನಾಶ ಪಡಿಸಲಾಗುವುದು ಎಂದು ತಹಶೀಲ್ದಾರ್ ದ್ರಾಕ್ಷಾಯಿಣಿ ತಿಳಿಸಿದ್ದಾರೆ. ದಾಳಿ ಸಂದರ್ಭದಲ್ಲಿ ರಾಜಸ್ವ ನಿರೀಕ್ಷಕರಾದ ಬಸವರಾಜ್, ಚಂದ್ರೇಗೌಡ, ಕಂದಾಯ ಇಲಾಖೆ ನೌಕರ ಚೇತನ್, ಗ್ರಾಮ ಲೆಕ್ಕಾಧಿಕಾರಿ ರಾಮೇಗೌಡ, ಗ್ರಾಮ ಸಹಾಯಕ ಚೂಡಣ್ಣ  ಇತರರು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.