ಫಿಸಿಯೊ ಪ್ಯಾಟ್ರಿಕ್‌ಗೆ ಹಸಿರು ನಿಶಾನೆ

ಸೋಮವಾರ, ಜೂಲೈ 22, 2019
27 °C

ಫಿಸಿಯೊ ಪ್ಯಾಟ್ರಿಕ್‌ಗೆ ಹಸಿರು ನಿಶಾನೆ

Published:
Updated:

ನವದೆಹಲಿ (ಐಎಎನ್‌ಎಸ್): ಲಂಡನ್ ಒಲಿಂಪಿಕ್ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಭಾರತ ತಂಡದೊಂದಿಗೆ ಇರಲು ಫಿಸಿಯೊ ಪ್ಯಾಟ್ರಿಕ್ ಕೆನ್ನಿ ಅವರಿಗೆ ಭಾರತ ಒಲಿಂಪಿಕ್ ಸಂಸ್ಥೆ (ಐಒಎ) ಹಸಿರು ನಿಶಾನೆ ತೋರಿಸಿದೆ.ಪ್ಯಾಟ್ರಿಕ್ ಅವರಿಗೆ ಪೂರ್ಣಾವಧಿ ಪಾಸ್ ನೀಡಲಾಗುವುದಿಲ್ಲ. ಬದಲಿಗೆ ದೈನಿಕ ಪಾಸ್ ನೀಡಲು ನಿರ್ಧರಿಸಲಾಗಿದೆ ಎಂದು ಐಒಎ ಹಂಗಾಮಿ ಅಧ್ಯಕ್ಷ ವಿಜಯ್ ಕುಮಾರ್ ಮಲ್ಹೋತ್ರಾ ಅವರು ಗುರುವಾರ ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.`ಈಗಾಗಲೇ ತಂಡದೊಂದಿಗೆ ಮೂವರು ಫಿಸಿಯೊಗಳಿದ್ದಾರೆ. ಆದ್ದರಿಂದ ಹೆಚ್ಚುವರಿಯಾಗಿ ಮತ್ತೊಬ್ಬ ಫಿಸಿಯೊ ಅಗತ್ಯವಿಲ್ಲ. ಆದರೆ ಕೆಲವು ಕ್ರೀಡಾಪಟುಗಳು ಪ್ಯಾಟ್ರಿಕ್ ನೆರವು ಅಗತ್ಯವೆಂದು ಕೋರಿದ್ದಾರೆ. ಅವರ ಮನವಿಯನ್ನು ಮಾನ್ಯ ಮಾಡಲಾಗಿದೆ~ ಎಂದು ಹೇಳಿದರು.ಬೀಜಿಂಗ್ ಒಲಿಂಪಿಕ್‌ನಲ್ಲಿ ಕಂಚಿನ ಪದಕ ಗೆದ್ದಿದ್ದ ಕುಸ್ತಿಪಟು ಸುಶೀಲ್ ಕುಮಾರ್, ಮಹಿಳಾ ಕುಸ್ತಿ ಸ್ಪರ್ಧಿ ಗೀತಾ ಫೋಗಟ್, ಶೂಟರ್ ರೊಂಜನ್ ಸೋಧಿ ಹಾಗೂ ಮಹಿಳಾ ಆರ್ಚರಿ ತಂಡದ ಸದಸ್ಯರು ಒಲಿಂಪಿಕ್ ಕೂಟದ ಸಂದರ್ಭದಲ್ಲಿ ಪ್ಯಾಟ್ರಿಕ್ ನೆರವು ಅಗತ್ಯವೆಂದು ಐಒಎಗೆ ತಿಳಿಸಿದ್ದರು.ಇಂಗ್ಲೆಂಡ್‌ನವರಾದ ಪ್ಯಾಟ್ರಿಕ್ ತಂಡದೊಂದಿಗೆ ಇರುತ್ತಾರೆನ್ನುವ ವಿಷಯ ತಿಳಿದ ಕುಸ್ತಿ ತಂಡದ ಪ್ರಧಾನ ಕೋಚ್ ಯಶ್ವೀರ್ ಸಿಂಗ್ ಅವರು ಭಾರಿ ಸಂತಸಗೊಂಡರು. ಅಷ್ಟೇ ಅಲ್ಲ ಐಒಎಗೆ ಕೃತಜ್ಞತೆ ಕೂಡ ಸಲ್ಲಿಸಿದರು.

`ಕೆನ್ನಿ ಅವರು ಒಳ್ಳೆಯ ಫಿಸಿಯೊ. ಅಮೆರಿಕಾದ ಕಾಲೊರಾಡೊದಲ್ಲಿ ಅಭ್ಯಾಸ ಶಿಬಿರ ನಡೆಸಿದ್ದಾಗ ನಮ್ಮ ಕುಸ್ತಿ ಪಟುಗಳಿಗೆ ಸಾಕಷ್ಟು ನೆರವಾದರು. ತಂಡದ ಸದಸ್ಯರು ಅವರೊಂದಿಗೆ ಒಳ್ಳೆ ಹೊಂದಾಣಿಕೆ ಕೂಡ ಹೊಂದಿದ್ದಾರೆ~ ಎಂದರು ಯಶ್ವೀರ್.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry