ಭಾನುವಾರ, ಜೂನ್ 20, 2021
26 °C

ಫೀಡರ್ ಕಾಲುವೆ ಕಾಮಗಾರಿಗೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಾಪುರ: ಕೆರೆಗಳಿಗೆ ನೀರು ತುಂಬುವ ಯೋಜನೆಯ ಕಾಮಗಾರಿಯನ್ನು ಇನ್ನಷ್ಟು ವೇಗಗೊಳಿಸಿ ಬರಗಾಲದ ಈ ಸಂದರ್ಭದಲ್ಲಿ ಬತ್ತಿದ ಕೆರೆಗಳನ್ನು ತುಂಬಿಸಲು ಸಾಕಷ್ಟು ಪ್ರಯತ್ನ ನಡೆಸಲಾಗುತ್ತಿದೆ ಎಂದು ಬಬಲೇಶ್ವರ ಶಾಸಕ ಎಂ.ಬಿ. ಪಾಟೀಲ ಹೇಳಿದರು.ನೆನೆಗುದಿಗೆ ಬಿದಿದ್ದ ಬಾಬಾನಗರ ಫೀಡರ್ ಕಾಲುವೆಯ ರೂ.195 ಲಕ್ಷ ವೆಚ್ಚದ ಕಾಮಗಾರಿಗೆ ಬುಧವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.ಕಾಮಗಾರಿಯನ್ನು ತ್ವರಿತಗತಿಯಲ್ಲಿ ಮುಗಿಸಲು ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮೋಯಿ ಅವರಿಗೆ ವಿನಂತಿಸಿದ್ದು, ಗುತ್ತಿಗೆದಾರರಿಗೆ ಇನ್ನಷ್ಟು ವೇಗವಾಗಿ ಕೆಲಸ ಕೈಕೊಳ್ಳುವಂತೆ ಸೂಚಿಸಿದ್ದಾರೆ ಎಂದರು.ಡೋಣಿ ಹಳ್ಳವನ್ನು ತಿರುಗಿಸಿ ಬಾಬಾನಗರ ಹಾಗೂ ಸುತ್ತಲಿನ ಕೆರೆಗಳನ್ನು ತುಂಬಿಸುವ ಫೀಡರ್ ಕಾಲುವೆ ಕಾಮಗಾರಿಯನ್ನು ಸ್ಥಳೀಯ ರೈತ ಮುಖಂಡರ ಒತ್ತಾಯದ ಮೇರೆಗೆ ಕೈಗೆತ್ತಿಕೊಳ್ಳಲಾಗಿತ್ತು. ತಾಂತ್ರಿಕ ಮಂಡಳಿಯ ಅನುಮೋದನೆ ಪಡೆಯದೇ ವಿವಿಧ ಯೋಜನೆಗಳ ಅಡಿಯಲ್ಲಿ ಕಾಮಗಾರಿಗೆ ರೂ. 1 ಕೋಟಿ ಖರ್ಚುಮಾಡಲಾಗಿತ್ತು.ನೆನೆಗುದಿಗೆ ಬಿದಿದ್ದ ಈ ಯೋಜನೆಗೆ ಮತ್ತೆ ಚಾಲನೆ ನೀಡಲಾಗಿದೆ. ಅಂದಾಜು ರೂ. 2 ಕೋಟಿ ವೆಚ್ಚದಲ್ಲಿ ಕಾಲುವೆಗೆ ಪೈಪ್‌ಲೈನ್ ಅಳವಡಿಸಿ ಮೇಲ್ಭಾಗದಲ್ಲಿ ರಸ್ತೆ ನಿರ್ಮಿಸಲಾಗುವುದು ಎಂದರು.ಜಿ.ಪಂ. ಸದಸ್ಯೆ ರತ್ನಾಬಾಯಿ ಚಿನಗುಂಡಿ, ತಮ್ಮಣ್ಣ ಹಂಗರಗಿ, ಜಿ.ಪಂ. ಮಾಜಿ ಅಧ್ಯಕ್ಷ ಸೋಮನಾಥ ಬಾಗಲಕೋಟೆ, ವಿ.ಎಸ್. ಪಾಟೀಲ, ದ್ರಾಕ್ಷಿ ಬೆಳೆಗಾರ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಕೆ. ಚಿನಗುಂಡಿ, ಗ್ರಾ.ಪಂ. ಅಧ್ಯಕ್ಷ ಸಿದ್ದನಗೌಡ ರುದ್ರಗೌಡರ, ಉಪಾಧ್ಯಕ್ಷ ಯಲ್ಲವ್ವ ಸಿಂಗೆ, ಗಣ್ಯರಾದ ಸಿದ್ದುಗೌಡನವರ, ಶಂಕರಗೌಡ ಬಿರಾದಾರ, ಯಲ್ಲಾಲಿಂಗ ಹೊನವಾಡ ಇತರರು ವೇದಿಕೆಯಲ್ಲಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.