ಶನಿವಾರ, ಮೇ 8, 2021
23 °C

ಫುಕುಶಿಮಾ ಡೈಚಿ ಸ್ವಚ್ಛತೆಗೆ ಸಿದ್ಧತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಟೋಕಿಯೊ (ಕೈಡೊ): ಭೀಕರ ಭೂಕಂಪನ ಮತ್ತು ಸುನಾಮಿಯಿಂದಾಗಿ ದುರಂತಕ್ಕೀಡಾದ ಫುಕುಶಿಮಾ ಡೈಚಿ ಅಣು ಸ್ಥಾವರದ ವ್ಯಾಪ್ತಿಯ ಪ್ರದೇಶಗಳ ಸ್ವಚ್ಛತೆಗಾಗಿ ಜಪಾನ್ ಸರ್ಕಾರ 2.85 ಶತಕೋಟಿ ಡಾಲರ್‌ಗಳನ್ನು ವ್ಯಯಿಸಲಿದೆ.ಈ ಪ್ರದೇಶದ ಸುತ್ತಮುತ್ತಲೂ ಹರಡಿರುವ ಮತ್ತು ನೆಲದಾಳದಲ್ಲಿ ಹುದುಗಿರುವ ಅಣು ಸ್ಥಾವರದ ಅವಶೇಷಗಳನ್ನು ಪತ್ತೆ ಹಚ್ಚುವುದು, ವಿಕಿರಣಪೂರಿತ ಮಣ್ಣನ್ನು ಎತ್ತಿಹಾಕುವುದು ಇತ್ಯಾದಿ ಪರಿಷ್ಕರಣಾ ಕೆಲಸಗಳಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ಜಪಾನ್ ಕೇಂದ್ರ ಸರ್ಕಾರದ ಸಂಪುಟ ಕಾರ್ಯದರ್ಶಿ ಒಸಾಮು ಪುಜಿಮುರಾ ತಿಳಿಸಿದ್ದಾರೆ.ಈ ಅವಶೇಷಗಳು ಮತ್ತು ವಿಕಿರಣಪೂರಿತ ವಸ್ತುಗಳನ್ನು ಒಂದೆಡೆ ಕಲೆ ಹಾಕುವ ತನ್ನ ಮೊದಲಿನ ನಿರ್ಧಾರಕ್ಕೆ ಸರ್ಕಾರ ಬದ್ಧವಾಗಿದೆ ಎಂದು ಒಸಾಮು ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.