ಫುಕುಶಿಮಾ ಸ್ಥಾವರದಿಂದ ವಿಕಿರಣಪೂರಿತ ನೀರು

7

ಫುಕುಶಿಮಾ ಸ್ಥಾವರದಿಂದ ವಿಕಿರಣಪೂರಿತ ನೀರು

Published:
Updated:

ಟೋಕಿಯೊ (ಕ್ಯೂಡೊ): ಕಳೆದ ವರ್ಷದ ಭೂಕಂಪದ ಸಂದರ್ಭದಲ್ಲಿ ಹಾನಿಗೊಳಗಾಗಿದ್ದ ಫುಕುಶಿಮಾ ಅಣು ಸ್ಥಾವರದ ನಾಲ್ಕನೇ ರಿಯಾಕ್ಟರ್‌ನಿಂದ ವಿಕಿರಣಪೂರಿತ ನೀರು ಸೋರಿಕೆಯಾಗಿದೆ ಎಂದು ಟೋಕಿಯೊ ವಿದ್ಯುತ್ ಶಕ್ತಿ ಕಂಪೆನಿ ತಿಳಿಸಿದೆ.ಆದರೆ, ಈ ನೀರು ಸ್ಥಾವರದ ಕಟ್ಟಡದ ಹೊರಗೆ ಹರಿದಿಲ್ಲ. ಬಹುಶಃ ಕೊಳವೆ ಮಾರ್ಗ ಒಡೆದಿದ್ದರಿಂದ 6 ಲೀಟರ್‌ನಷ್ಟು ನೀರು ಸ್ಥಾವರದ ಒಳಾಂಗಣದ ನೆಲಕ್ಕೆ ಚೆಲ್ಲಿತು. ಸ್ಥಾವರಗಳನ್ನು ತಂಪಾಗಿಡುವ `ಕೂಲರ್~ಗಳಲ್ಲಿ ಬಳಕೆಯಾಗಿದ್ದರಿಂದ ಈ ನೀರಿನಲ್ಲಿ ವಿಕಿರಣವಸ್ತುಗಳಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry