ಫುಟ್‌ಬಾಲ್‌: ಸೆಮಿಫೈನಲ್‌ಗೆ ಈಸ್ಟ್‌ ಬೆಂಗಾಲ್‌

7

ಫುಟ್‌ಬಾಲ್‌: ಸೆಮಿಫೈನಲ್‌ಗೆ ಈಸ್ಟ್‌ ಬೆಂಗಾಲ್‌

Published:
Updated:

ಪೆದಾಂಗ್‌, ಇಂಡೊನೇಷ್ಯಾ (ಪಿಟಿಐ/ಐಎಎನ್‌ಎಸ್‌):  ಗಮನಾರ್ಹ ಪ್ರದರ್ಶನ ತೋರಿದ ಭಾರತದ ಐ ಲೀಗ್‌ ತಂಡ ಈಸ್ಟ್‌ ಬೆಂಗಾಲ್‌ ಎಎಫ್‌ಸಿ ಕಪ್‌ ಫುಟ್‌ಬಾಲ್‌ ಟೂರ್ನಿಯ ಸೆಮಿಫೈನಲ್‌ ತಲುಪಿದೆ.ಹಾಜಿ ಅಗುಸ್‌ ಸಲೀಮ್‌ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಎರಡನೇ ಹಂತದ ಕ್ವಾರ್ಟರ್‌ ಫೈನಲ್‌ನಲ್ಲಿ ಈಸ್ಟ್‌ ಬೆಂಗಾಲ್‌ 1–1 ಗೋಲಿನಿಂದ ಇಂಡೊನೇಷ್ಯಾದ ಸೆಮೆನ್‌ ಪೆದಾಂಗ್‌ ಎದುರು ಡ್ರಾ ಸಾಧಿಸುವಲ್ಲಿ ಯಶಸ್ವಿಯಾಯಿತು.ಈ ಕಾರಣ ನಾಲ್ಕರ ಘಟ್ಟಕ್ಕೆ ರಹದಾರಿ ಪಡೆಯಿತು. ಕೋಲ್ಕತ್ತದಲ್ಲಿ ನಡೆದ ಮೊದಲ ಹಂತದ ಕ್ವಾರ್ಟರ್‌ ಫೈನಲ್‌ನಲ್ಲಿ ಈಸ್ಟ್‌ ಬೆಂಗಾಲ್‌ 2–1 ಗೋಲಿನಿಂದ ಪೆದಾಂಗ್‌ ಎದುರು ಗೆಲುವು ಸಾಧಿಸಿತ್ತು.  2008ರಲ್ಲಿ ಗೋವಾದ ಡೆಂಪೊ ಸ್ಪೋರ್ಟ್‌ಸ ತಂಡದವರು ಈ ಟೂರ್ನಿಯ ಸೆಮಿಫೈನಲ್‌ ತಲುಪಿದ್ದರು. ಆ ಬಳಿಕ ಈ ಸಾಧನೆ ಮಾಡಿದ್ದು ಈಸ್ಟ್‌ ಬೆಂಗಾಲ್‌. 2004ರಲ್ಲಿ ಈ ತಂಡ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದು ಇದುವರೆಗಿನ ಅತ್ಯುತ್ತಮ ಸಾಧನೆಯಾಗಿತ್ತು.ಅಭಿನಂದನೆ: ಈಸ್ಟ್‌ ಬೆಂಗಾಲ್‌ ತಂಡವನ್ನು ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್‌ (ಎಐಎಫ್‌ಎಫ್‌) ಅಭಿನಂದಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry