ಫುಟ್‌ಬಾಲ್‌: ಇಂದು ಭಾರತ– ಮಾಲ್ಡೀವ್ಸ್‌ ಸೆಮಿಫೈನಲ್‌

7

ಫುಟ್‌ಬಾಲ್‌: ಇಂದು ಭಾರತ– ಮಾಲ್ಡೀವ್ಸ್‌ ಸೆಮಿಫೈನಲ್‌

Published:
Updated:

ಕಠ್ಮಂಡು (ಪಿಟಿಐ/ಐಎಎನ್‌ಎಸ್‌): ಲೀಗ್‌ ಹಂತದಲ್ಲಿ ತೋರಿದ ಉತ್ತಮ ಪ್ರದರ್ಶನ ಮತ್ತು ‘ಅದೃಷ್ಟ’ದ ಬಲದಿಂದ ಸೆಮಿಫೈನಲ್‌ ಪ್ರವೇಶಿಸಿರುವ ಭಾರತ ತಂಡ ಸ್ಯಾಫ್‌ ಕಪ್‌ ಫುಟ್‌­ಬಾಲ್‌ ಚಾಂಪಿಯನ್‌ಷಿಪ್‌ನ ಸೆಮಿ­ಫೈನ­ಲ್‌­ನಲ್ಲಿ ಸೋಮವಾರ ಮಾಲ್ಡೀ­ವ್ಸ್‌ ಎದುರು ಪೈಪೋಟಿ ನಡೆಸಲಿದೆ.ಸ್ಯಾಫ್‌ ಕಪ್‌ನಲ್ಲಿ ಆರು ಸಲ ಪ್ರಶಸ್ತಿ ಪಡೆದಿರುವ ಹಾಗೂ ಹಾಲಿ ಚಾಂಪಿಯನ್‌ ಕೂಡಾ ಆಗಿರುವ ಭಾರತ ತಂಡ  ಈ ಸಲ ಲೀಗ್‌ ಹಂತದಲ್ಲಿಯೇ ಟೂರ್ನಿಯಿಂದ ಹೊರಬೀಳುವ ಭೀತಿಯಲ್ಲಿತ್ತು. ಕೊನೆಯ ಲೀಗ್‌ ಪಂದ್ಯದಲ್ಲಿ ನೇಪಾಳದ ಎದುರು ಸೋಲು ಕಂಡಿತ್ತು. ಆದರೆ, ಇನ್ನೊಂದು ಪಂದ್ಯದಲ್ಲಿ ಪಾಕಿಸ್ತಾನ ತಂಡ 2–1 ಗೋಲುಗಳಿಂದ ಬಾಂಗ್ಲಾದೇಶವನ್ನು ಮಣಿಸಿದ್ದು ಭಾರತಕ್ಕೆ ವರದಾನವಾಗಿತ್ತು.ಇದಕ್ಕೂ ಮುಂಚಿನ ಲೀಗ್‌ ಪಂದ್ಯದಲ್ಲಿ ಸುನಿಲ್‌ ಚೆಟ್ರಿ ಬಳಗ ಪಾಕಿಸ್ತಾನದ ಎದುರು 1–0ರಲ್ಲಿ ಜಯ ಸಾಧಿಸಿತ್ತು. ಆದರೆ, ಬಾಂಗ್ಲಾ ಎದುರಿನ ಪಂದ್ಯದಲ್ಲಿ ಡ್ರಾ ಸಾಧಿಸಿತ್ತು. ‘ಎ’ ಗುಂಪಿನ ಪಂದ್ಯದಲ್ಲಿ 4 ಪಾಯಿಂ­ಟ್‌ ಗಳಿಸಿ 2ನೇ ಸ್ಥಾನ ಪಡೆದು ಭಾರತ ನಾಲ್ಕರ ಘಟ್ಟ ತಲುಪಿದೆ. ‘ಬಿ’ ಗುಂಪಿನಲ್ಲಿದ್ದ ಮಾಲ್ಡೀವ್ಸ್‌ ಏಳು ಪಾಯಿಂಟ್‌ಗಳಿಂದ ಅಗ್ರಸ್ಥಾನ ಪಡೆದಿದೆ. ಲೀಗ್‌ ಹಂತದಲ್ಲಿ ಈ ತಂಡ ಎರಡು ಪಂದ್ಯಗಳಲ್ಲಿ ಗೆಲುವು ಮತ್ತು ಒಂದು ಪಂದ್ಯದಲ್ಲಿ ಡ್ರಾ ಸಾಧಿಸಿತ್ತು.‘ಮಾಲ್ಡೀವ್ಸ್‌ ತಂಡವನ್ನು ಸುಲಭ­ವಾಗಿ ಪರಿಗಣಿಸಲು ಸಾಧ್ಯವಿಲ್ಲ. ಆ ತಂಡ ಬಲಿಷ್ಠವಾಗಿದೆ. ಪ್ರತಿ ಪಂದ್ಯವೂ ನಮಗೆ ಸವಾಲಿದ್ದಂತೆ. ಹಿಂದಿನ ಎರಡು ಮೂರು ಪಂದ್ಯಗಳಲ್ಲಿ ಮಾಲ್ಡೀವ್ಸ್‌ ಎದುರು ಗೆಲುವು ಪಡೆದಿದ್ದೆವು. ಅದ್ಯಾವುದನ್ನೂ ಇಲ್ಲಿ ನೆನಪಿನಲ್ಲಿಟ್ಟು­ಕೊಳ್ಳುವುದಿಲ್ಲ. ಏಕೆಂದರೆ, ಇತಿಹಾಸ ಮರುಕಳಿಸುವುದಿಲ್ಲ’ ಎಂದು ಭಾರತ ತಂಡದ ಗೋಲ್‌ ಕೀಪರ್ ಸುಬ್ರತೊ ಪಾಲ್ ಹೇಳಿದ್ದಾರೆ.ಫೈನಲ್‌ಗೆ ಆಫ್ಘನ್‌: ಭಾನುವಾರ ನಡೆದ ಸೆಮಿಫೈನಲ್‌ನಲ್ಲಿ ಆಫ್ಘಾನಿಸ್ತಾನ ತಂಡ 1–0 ಗೋಲಿನಿಂದ ಆತಿಥೇಯ ನೇಪಾಳ ತಂಡವನ್ನು ಮಣಿಸಿ ಫೈನಲ್‌ ಪ್ರವೇಶಿಸಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry