ಬುಧವಾರ, ಜೂನ್ 16, 2021
23 °C

ಫುಟ್‌ಬಾಲ್‌: ಜೆಎನ್‌ಎನ್‌ಸಿಇ ಕಾಲೇಜಿಗೆ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಪಂದ್ಯದ ಬಹುತೇಕ ಅವಧಿಯಲ್ಲಿ ಮೇಲುಗೈ ಸಾಧಿಸಿದ ಶಿವಮೊಗ್ಗದ ಜವಾಹರಲಾಲ್‌ ನೆಹರೂ ನ್ಯಾಷನಲ್‌ ಕಾಲೇಜ್‌ ಆಫ್‌ ಎಂಜಿನಿಯರಿಂಗ್‌ (ಜೆಎನ್‌ಎನ್‌ಸಿಇ) ತಂಡ 2–1 ಗೋಲುಗಳಿಂದ ಆತಿಥೇಯ ಯು.ಬಿ.ಡಿ.ಟಿ ಎಂಜಿನಿಯರಿಂಗ್‌ ಕಾಲೇಜು ತಂಡವನ್ನು ಸೋಲಿಸಿ ವಿಶ್ವೇಶ್ವರಯ್ಯ ತಾಂತ್ರಿಕ ವಿದ್ಯಾಲಯ ಅಂತರ ಕಾಲೇಜು ಫುಟ್‌ಬಾಲ್‌ ಟೂರ್ನಿ ಪ್ರಶಸ್ತಿ ಗೆದ್ದುಕೊಂಡಿತು.ಯುಬಿಡಿಟಿ ಕಾಲೇಜು ಮೈದಾನದಲ್ಲಿ ಗುರುವಾರ ನಡೆದ ಫೈನಲ್‌ ಪಂದ್ಯದಲ್ಲಿ ವಿರಾಮದ ವೇಳೆಗೆ ಶಿವಮೊಗ್ಗದ ತಂಡ 1–0 ಗೋಲಿನಿಂದ ಮುಂದಿತ್ತು. ಎರಡು ಬಾರಿ ವಿಟಿಯು ತಂಡಕ್ಕೆ ನಾಯಕರಾಗಿದ್ದ ಅಭಿಲಾಷ್‌ (ಪೆನಾಲ್ಟಿ ಮೂಲಕ) ಎಂಟನೇ ನಿಮಿಷ, ಮನಿಷ್‌ ಉತ್ತರಾರ್ಧದ 18ನೇ ನಿಮಿಷ ಜೆಎನ್‌ಎನ್‌ಸಿಇ ತಂಡಕ್ಕೆ ಗೋಲು ತಂದಿತ್ತರೆ, ಪಂದ್ಯ ಮುಗಿಯಲು ಮೂರು ನಿಮಿಷಗಳಿರುವಾಗ ಟಾಮ್‌, ಯುಬಿಡಿಟಿ ಪರ ಸೋಲಿನ ಅಂತರ ಕಡಿಮೆ ಮಾಡಿದರು.ಸೆಮಿಫೈನಲ್‌ ಪಂದ್ಯದಲ್ಲಿ ದಾವಣಗೆರೆಯ ಯುಬಿಡಿಟಿ ಪೆನಾಲ್ಟಿ ಶೂಟೌಟ್‌ನಲ್ಲಿ 4–2 ಗೋಲುಗಳಿಂದ ತುಮಕೂರಿನ ಶ್ರೀಸಿದ್ಧಗಂಗಾ ತಾಂತ್ರಿಕ ಮಹಾವಿದ್ಯಾಲಯ ತಂಡವನ್ನು ಸೋಲಿಸಿತು. ಈ ಪಂದ್ಯದ ನಿಗದಿ ಅವಧಿಯ ಆಟ 1–1 ರಲ್ಲಿ ಸಮನಾಗಿತ್ತು. ಇನ್ನೊಂದು ಸೆಮಿಫೈನಲ್‌ನಲ್ಲಿ ಜೆಎನ್‌ಎನ್‌ಸಿಇ 3–1 ಕಾಲೇಜುಗಳಿಂದ ಹಾಸನದ ರಾಜೀವ್‌ ತಾಂತ್ರಿಕ ಮಹಾವಿದ್ಯಾಲಯ ತಂಡವನ್ನು ಸೋಲಿಸಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.