ಶುಕ್ರವಾರ, ಜೂನ್ 18, 2021
28 °C

ಫುಟ್‌ಬಾಲ್‌: ಯಂಗ್‌ ಚಾಲೆಂಜರ್ಸ್‌ ಚಾಂಪಿಯನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಯಂಗ್‌ ಚಾಲೆಂಜರ್ಸ್‌ ತಂಡದವರು ಬೆಂಗಳೂರು ಜಿಲ್ಲಾ ಫುಟ್‌ಬಾಲ್‌ ಸಂಸ್ಥೆ (ಬಿಡಿಎಫ್‌ಎ) ಆಶ್ರಯದಲ್ಲಿ ನಡೆದ ‘ಸಿ’ಡಿವಿಷನ್‌ ಫುಟ್‌ಬಾಲ್‌ ಟೂರ್ನಿಯಲ್ಲಿ ಚಾಂಪಿಯನ್‌ ಆಗಿ ಹೊರ ಹೊಮ್ಮಿದ್ದಾರೆ.ಬಸವನಗುಡಿಯ ಬಿಯುಎಫ್‌ಸಿ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಫೈನಲ್‌ ಹಣಾಹಣಿಯಲ್ಲಿ ಯಂಗ್‌ ಚಾಲೆಂಜರ್ಸ್‌ ಪೆನಾಲ್ಟಿ ಶೂಟೌಟ್‌ನಲ್ಲಿ 3-0 ಗೋಲುಗಳಿಂದ  ಇಂದಿರಾನಗರ ತಂಡವನ್ನು ಮಣಿಸಿತು.ಪಂದ್ಯದ 20ನೇ ನಿಮಿಷದಲ್ಲಿ ಇಂದಿರಾನಗರ ತಂಡದ ಮುರಳಿ ಚಾಲೆಂಜರ್ಸ್‌ ತಂಡಕ್ಕೆ ‘ಉಡುಗೊರೆ’ ಗೋಲು ನೀಡಿದರು. ಇದರ ಬೆನ್ನಲ್ಲೇ ಚಾಲೆಂಜರ್ಸ್‌ ತಂಡದ ಪ್ರೇಮ್‌ (21ನೇ ನಿ.) ಗೋಲು ಬಾರಿಸಿ ತಂಡಕ್ಕೆ 2–0 ಗೋಲುಗಳ ಮುನ್ನಡೆ ಒದಗಿಸಿದರು.ಆದರೆ ಇಂದಿರಾನಗರದ ಪರ ಪಂದ್ಯದ 25ನೇ ನಿಮಿಷದಲ್ಲಿ ಸಾಹುಲ್‌ ಹಾಗೂ 60ನೇ ನಿಮಿಷದಲ್ಲಿ ಪ್ರದೀಪ್‌ ಗೋಲುಗಳಿಸಿ  ಸಮಬಲಕ್ಕೆ ಕಾರಣರಾದರು. ನಂತರದ ಆಟದಲ್ಲಿ ಉಭಯ ತಂಡಗಳ ಆಟಗಾರರಿಗೆ ಗೋಲು ಗಳಿಸಲು ಸಾಧ್ಯವಾಗಲಿಲ್ಲ. ನಿಗದಿತ ಅವಧಿಯಲ್ಲಿ 2-2 ರಲ್ಲಿ ಸಮಬಲ ಕಂಡುಬಂದ ಕಾರಣ ವಿಜೇತರನ್ನು ನಿರ್ಣಯಿಸಲು      ಪೆನಾಲ್ಟಿ ಶೂಟೌಟ್‌ ಮೊರೆ ಹೋಗಲಾಯಿತು.ಪೆನಾಲ್ಟಿ ಶೂಟೌಟ್‌ ಅವಕಾಶದಲ್ಲಿ ಚಾಲೆಂಜರ್ಸ್‌ನ ಮಹೇಶ್‌ ದೇವಯ್ಯ, ಮ್ಯಾಗಿ ಹಾಗೂ ತಾಮ್ಮಾರಿ ಚೆಂಡನ್ನು ಗುರಿ ಸೇರಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.