ಫುಟ್‌ಬಾಲ್‌: ಸ್ಪೋರ್ಟಿಂಗ್‌ ಚಾಂಪಿಯನ್‌

7

ಫುಟ್‌ಬಾಲ್‌: ಸ್ಪೋರ್ಟಿಂಗ್‌ ಚಾಂಪಿಯನ್‌

Published:
Updated:

ನವದೆಹಲಿ (ಪಿಟಿಐ): ಮೊಹಮ್ಮಡನ್‌ ಸ್ಪೋರ್ಟಿಂಗ್‌ ತಂಡದವರು ಡುರ್‍್ಯಾಂಡ್‌ ಕಪ್‌ ಫುಟ್‌ಬಾಲ್‌ ಟೂರ್ನಿಯಲ್ಲಿ ಚಾಂಪಿಯನ್‌ ಆಗಿದ್ದಾರೆ. ಈ ತಂಡದವರು 73 ವರ್ಷಗಳ ಬಳಿಕ ಈ ಸಾಧನೆ ಮಾಡಿದ್ದಾರೆ.ಕಿಕ್ಕಿರಿದು ತುಂಬಿದ್ದ ಅಂಬೇಡ್ಕರ್‌ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಫೈನಲ್‌ ಪಂದ್ಯದಲ್ಲಿ ಕೋಲ್ಕತ್ತ ಮೂಲದ ಮೊಹಮ್ಮಡನ್‌ ಸ್ಪೋರ್ಟಿಂಗ್‌ ತಂಡದವರು 2-1 ಗೋಲುಗಳಿಂದ ಒಎನ್‌ಜಿಸಿ ತಂಡವನ್ನು ಮಣಿಸಿದರು.ವಿಜಯಿ ತಂಡದ ಆ್ಯಂಟನಿ ಸೊರೆನ್‌ (36ನೇ ನಿಮಿಷ) ಹಾಗೂ ಆಸ್ಟ್ರೇಲಿಯಾ ಮೂಲದ ಟೊಲ್ಗೆ ಒಜೆಬಿ (44ನೇ ನಿಮಿಷ) ಚೆಂಡನ್ನು ಗುರಿ ಸೇರಿಸಿದರು.ಒಎನ್‌ಜಿಸಿ ತಂಡದ ಲವಿನೊ ಫರ್ನಾಂಡಿಸ್‌ 56ನೇ ನಿಮಿಷದಲ್ಲಿ ಗೋಲು ಗಳಿಸಿದರು. ಸ್ಪೋರ್ಟಿಂಗ್‌ ಕೊನೆಯ ಬಾರಿ ಅಂದರೆ 1940ರಲ್ಲಿ ಈ ಪ್ರತಿಷ್ಠ ಪ್ರಶಸ್ತಿ ಗೆದ್ದಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry