ಫುಟ್‌ಬಾಲ್: ಅಗ್ರಸ್ಥಾನದಲ್ಲಿ ಸ್ಪೋರ್ಟಿಂಗ್ ಯೂತ್

ಗುರುವಾರ , ಜೂಲೈ 18, 2019
28 °C

ಫುಟ್‌ಬಾಲ್: ಅಗ್ರಸ್ಥಾನದಲ್ಲಿ ಸ್ಪೋರ್ಟಿಂಗ್ ಯೂತ್

Published:
Updated:

ಬೆಂಗಳೂರು: ಕೊನೆಯ ಲೀಗ್ ಪಂದ್ಯದಲ್ಲಿ ಗೆಲುವು ಸಾಧಿಸಿದ ಸ್ಪೋರ್ಟಿಂಗ್ ಯೂತ್ ತಂಡ ಬಿಡಿಎಫ್‌ಎ ಆಶ್ರಯದಲ್ಲಿ ನಡೆಯುತ್ತಿರುವ `ಸಿ' ಡಿವಿಷನ್ ಫುಟ್‌ಬಾಲ್ ಲೀಗ್ ಚಾಂಪಿಯನ್‌ಷಿಪ್‌ನಲ್ಲಿ 18 ಪಾಯಿಂಟ್‌ಗಳೊಂದಿಗೆ ಅಗ್ರಸ್ಥಾನಕ್ಕೇರಿತು.ರಾಜ್ಯ ಫುಟ್‌ಬಾಲ್ ಸಂಸ್ಥೆ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಸ್ಪೋರ್ಟಿಂಗ್ ತಂಡ 5-0 ಗೋಲುಗಳಿಂದ ಕೊಂಕಣ್ ಎದುರು ಜಯಭೇರಿ ಮೊಳಗಿಸಿತು. ವಿಜಯಿ ತಂಡದ ಅರುಣ್ 18ನೇ ನಿಮಿಷದಲ್ಲಿ ಗೋಲಿನ ಖಾತೆ ತೆರೆದರೆ, ಮಣಿಮಾರನ್ (24 ಹಾಗೂ 41ನೇ ನಿಮಿಷ), ಪ್ರೇಮ್ (23 ಹಾಗೂ 38ನೇ ನಿ.) ಗೋಲು ಗಳಿಸಿ ಗೆಲುವಿನ ಅಂತರ ಹೆಚ್ಚಿಸಿದರು. ಕೊಂಕಣಿ ತಂಡದಲ್ಲಿ ಭಾರತ ಹಾಕಿ ತಂಡದ ಮಾಜಿ ನಾಯಕ ಭರತ್ ಚೆಟ್ರಿ ಆಡಿದ್ದರು. ಸಿ ಡಿವಿಷನ್‌ನಲ್ಲಿ ಭರತ್ ಈ ಸಲ ಏಳು ಪಂದ್ಯಗಳನ್ನಾಡಿದ್ದಾರೆ.ಶೈನಿಂಗ್ ಸ್ಟಾರ್ ತಂಡ ಸಹ 18 ಪಾಯಿಂಟ್‌ಗಳನ್ನು ಹೊಂದಿದೆ. ಆದರೆ, ಗೋಲುಗಳ ಅಂತರದ ಆಧಾರದ ಮೇಲೆ ಸ್ಪೋರ್ಟಿಂಗ್ ಯೂತ್ ಅಗ್ರಸ್ಥಾನ ಪಡೆದುಕೊಂಡಿತು. ಏಳು ಪಂದ್ಯಗಳಿಂದ ಈ ತಂಡ 16 ಗೋಲುಗಳನ್ನು ಗಳಿಸಿದರೆ, ಶೈನಿಂಗ್ 15 ಗೋಲುಗಳನ್ನು ಕಲೆ ಹಾಕಿದೆ. ಈವೆರೆಡೂ ತಂಡಗಳು ನಾಕೌಟ್ ಹಂತ ಪ್ರವೇಶಿಸಿವೆ. ರೇಂಜರ್ಸ್‌ 15 ಪಾಯಿಂಟ್‌ಗಳನ್ನು ಕಲೆ ಹಾಕಿದ್ದು ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.ವೆಟರನ್ಸ್ 3-1ಗೋಲುಗಳಿಂದ ಮಿಸಾಕಾ ಎದುರು ಜಯದ ನಗೆ ಬೀರಿತು. ವೆಟರನ್ಸ್ ತಂಡದ ಬಸಂತ್ 7ನೇ ನಿಮಿಷದಲ್ಲಿ ಗೋಲು ಗಳಿಸಿ ಆರಂಭಿಕ ಮುನ್ನಡೆ ತಂದುಕೊಟ್ಟರು. ಈ ತಂಡದ ಇನ್ನುಳಿದ ಗೋಲುಗಳನ್ನು ಚೇತನ್ (25ನೇ ನಿ.), ಸುನಿಲ್ (37ನೇ ನಿ.) ಮತ್ತು ಪ್ರಜ್ವಲ್ (55ನೇ ನಿ.) ಗೋಲುಗಳನ್ನು ಗಳಿಸಿದರು.ಇಂದಿನಿಂದ ಟೂರ್ನಿ: ಜಿಎಚ್‌ಐ ವಲಯ ಫುಟ್‌ಬಾಲ್ ಟೂರ್ನಿ ಸೋಮವಾರ ಆರಂಭವಾಗಲಿದ್ದು, ಬೆಂಗಳೂರು ಯಲ್ಲೋಸ್ ಹಾಗೂ ಯುನಿವರ್ಸೆಲ್, ನಾಡಪ್ರಭು ಕೆಂಪೇಗೌಡ-ಐಐಎಸ್‌ಸಿ ತಂಡಗಳು ಪೈಪೋಟಿ ನಡೆಸಲಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry