ಭಾನುವಾರ, ಏಪ್ರಿಲ್ 18, 2021
33 °C

ಫುಟ್‌ಬಾಲ್: ಆಗಸ್ಟ್ 22ರಿಂದ ನೆಹರೂ ಕಪ್;ಭಾರತದ ಎದುರಾಳಿ ಸಿರಿಯಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಹಾಲಿ ಚಾಂಪಿಯನ್ ಭಾರತ ಆಗಸ್ಟ್ 22ರಂದು ಇಲ್ಲಿ ಆರಂಭವಾಗಲಿರುವ ನೆಹರೂ ಕಪ್ ಫುಟ್‌ಬಾಲ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಸಿರಿಯಾ ತಂಡವನ್ನು ಎದುರಿಸಲಿದೆ.ಜವಾಹರಲಾಲ್ ನೆಹರೂ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಟೂರ್ನಿಯಲ್ಲಿ ಆತಿಥೇಯ ಭಾರತವಲ್ಲದೇ, ಕೆಮರೂನ್, ಸಿರಿಯಾ, ನೇಪಾಳ ಹಾಗೂ ಮಾಲ್ಡೀವ್ಸ್ ತಂಡಗಳು ಪಾಲ್ಗೊಳ್ಳಲಿವೆ. ರೌಂಡ್ ರಾಬಿನ್ ಲೀಗ್ ಹಂತದಲ್ಲಿ ಪ್ರತಿ ತಂಡ ಮತ್ತೊಂದು ತಂಡವನ್ನು ಒಂದು ಬಾರಿ ಎದುರಿಸಲಿದೆ. ಹೆಚ್ಚು ಪಾಯಿಂಟ್ ಕಲೆಹಾಕುವ ಎರಡು ತಂಡಗಳು ಸೆಪ್ಟೆಂಬರ್ 2ರಂದು ನಡೆಯಲಿರುವ ಫೈನಲ್‌ನಲ್ಲಿ ಪೈಪೋಟಿ ನಡೆಸಲಿವೆ.ಈ ಹಿಂದಿನ ಎರಡೂ ಟೂರ್ನಿಗಳಲ್ಲಿ ಭಾರತ ತಂಡ ಸಿರಿಯಾ ಎದುರು ಗೆದ್ದು ಚಾಂಪಿಯನ್ ಆಗಿತ್ತು. ಈ ಬಾರಿಯೂ ಪ್ರಶಸ್ತಿ ಉಳಿಸಿಕೊಳ್ಳುವ ವಿಶ್ವಾಸದಲ್ಲಿದೆ. ನೂತನ ಕೋಚ್ ವಿಮ್ ಕೋವರ್‌ಮನ್ಸ್ ಮಾರ್ಗದರ್ಶನದಲ್ಲಿ ತಂಡ ಕಣಕ್ಕಿಳಿಯುತ್ತಿದೆ. ಸದ್ಯ ಭಾರತ ತಂಡದವರು ಬೆಂಗಳೂರಿನ ಕರ್ನಾಟಕ ರಾಜ್ಯ ಫುಟ್‌ಬಾಲ್ ಸಂಸ್ಥೆ ಕ್ರೀಡಾಂಗಣದಲ್ಲಿ ಅಭ್ಯಾಸದಲ್ಲಿ ನಿರತರಾಗಿದ್ದಾರೆ. ಕೆಲ ದಿನಗಳ ಬಳಿಕ ಗ್ರೇಟರ್ ನೊಯಿಡಾದಲ್ಲಿರುವ ಜೇಪಿ ಗ್ರೀನ್ಸ್‌ನಲ್ಲಿ ಅಭ್ಯಾಸ ಮುಂದುವರಿಸಲಿದ್ದಾರೆ.ವೇಳಾಪಟ್ಟಿ ಇಂತಿದೆ: ಆಗಸ್ಟ್ 22: ಭಾರತ-ಸಿರಿಯಾ, ಆ. 23:  ಮಾಲ್ಡೀವ್ಸ್-ನೇಪಾಳ, ಆ.24: ಸಿರಿಯಾ-ಕೆಮರೂನ್, ಆ.25: ಭಾರತ-ಮಾಲ್ಡೀವ್ಸ್, ಆ.26: ನೇಪಾಳ-ಕೆಮರೂನ್, ಆ.27: ಮಾಲ್ಡೀವ್ಸ್-ಸಿರಿಯಾ, ಆ.28: ಭಾರತ-ನೇಪಾಳ. ಆ.29: ಕೆಮರೂನ್-ಮಾಲ್ಡೀವ್ಸ್, ಆ.30: ಸಿರಿಯಾ-ನೇಪಾಳ, ಆ.31: ಭಾರತ-ಕೆಮರೂನ್. ಸೆಪ್ಟೆಂಬರ್ 2: ಫೈನಲ್.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.