ಫುಟ್‌ಬಾಲ್: ಎಂಇಜಿಗೆ ಜಯ

ಬುಧವಾರ, ಜೂಲೈ 17, 2019
24 °C

ಫುಟ್‌ಬಾಲ್: ಎಂಇಜಿಗೆ ಜಯ

Published:
Updated:

ಬೆಂಗಳೂರು: ಎಂಇಜಿ ತಂಡ ಬಿಡಿಎಫ್‌ಎ ಆಶ್ರಯದಲ್ಲಿ ಇಲ್ಲಿ ನಡೆಯುತ್ತಿರುವ ಸೂಪರ್ ಡಿವಿಷನ್ ಫುಟ್‌ಬಾಲ್ ಲೀಗ್ ಚಾಂಪಿಯನ್‌ಷಿಪ್ ಪಂದ್ಯದಲ್ಲಿ ಸುಲಭ ಗೆಲುವು ಪಡೆಯಿತು.ಅಶೋಕ ನಗರ ಬೆಂಗಳೂರು ಜಿಲ್ಲಾ ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಎಂಇಜಿ ತಂಡ 4-0ಗೋಲುಗಳಿಂದ ಧರ್ಮರಾಜ ಯೂನಿಯನ್ ತಂಡವನ್ನು ಮಣಿಸಿತು.ಪೆನಾಲ್ಟಿ ಕಾರ್ನರ್ ಅವಕಾಶವನ್ನು ಬಳಸಿಕೊಂಡ ವಿಜಯಿ ತಂಡದ ಲೋಕೇಶ್ವರ ಸಿಂಗ್ 16ನೇ ನಿಮಿಷದಲ್ಲಿ ಗೋಲಿನ ಖಾತೆ ತೆರೆದರು. ನಂತರ (40ನೇ ನಿ.) ಮತ್ತೊಂದು ಗೋಲನ್ನು ತಂದಿತ್ತರು. ದೀಪಿನ್ ತಾಪಾ (82) ಹಾಗೂ ರಾಮು  (88) ಗೆಲುವಿನ ಅಂತರ ಹೆಚ್ಚಿಸಿದರು.ಎಲ್‌ಆರ್‌ಡಿಇ ತಂಡಕ್ಕೆ ವಿಜಯ: ಇದಕ್ಕೂ ಮೊದಲು ನಡೆದ `ಎ~ ಡಿವಿಷನ್ ಲೀಗ್ ಪಂದ್ಯದಲ್ಲಿ ಎಲ್‌ಆರ್‌ಡಿಇ ತಂಡ 2-1ಗೋಲುಗಳಿಂದ ಸರ್ಕಾರಿ ಮುದ್ರಣಾಲಯ ತಂಡವನ್ನು ಮಣಿಸಿತು.ಸ್ಟಾಲಿನ್ ಹಾಗೂ ಚಂದ್ರ ಕುಮಾರ್ ಅವರು ಕ್ರಮವಾಗಿ 20 ಹಾಗೂ 78ನೇ ನಿ. ತಲಾ ಒಂದು ಗೋಲು ತಂದಿತ್ತು ಗೆಲುವಿನಲ್ಲಿ ರೂವಾರಿ ಎನಿಸಿದರು.ಶನಿವಾರದ ಪಂದ್ಯಗಳು: ರಾಯಲ್ಸ್-ಎಡಿಎ (ಮಧ್ಯಾಹ್ನ 2ಗಂಟೆಗೆ) ಹಾಗೂ ಕೆಎಸ್‌ಪಿ-ಐಎಸ್‌ಆರ್‌ಒ (ಸಂಜೆ 4ಗಂಟೆ).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry