ಗುರುವಾರ , ಮಾರ್ಚ್ 4, 2021
18 °C

ಫುಟ್‌ಬಾಲ್: ಎಂಇಜಿಗೆ ಮಣಿದ ಕೆಎಸ್‌ಪಿ ತಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಫುಟ್‌ಬಾಲ್: ಎಂಇಜಿಗೆ ಮಣಿದ ಕೆಎಸ್‌ಪಿ ತಂಡ

ಬೆಂಗಳೂರು: ಎಂಇಜಿ ತಂಡ ಇಲ್ಲಿ ನಡೆಯುತ್ತಿರುವ ಬಿಡಿಎಫ್‌ಎ ಆಶ್ರಯದ ರಾಜ್ಯ ಸೂಪರ್ ಡಿವಿಷನ್ ಲೀಗ್ ಫುಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ತನ್ನ ಗೆಲುವಿನ ಓಟ ಮುಂದುವರಿಸಿದೆ.ಅಶೋಕನಗರ ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಎಂಇಜಿ 2-0 ಗೋಲುಗಳಿಂದ ಕರ್ನಾಟಕ ರಾಜ್ಯ ಪೊಲೀಸ್ (ಕೆಎಸ್‌ಪಿ) ತಂಡವನ್ನು ಮಣಿಸಿತು.ಪಂದ್ಯದ ಮೊದಲಾರ್ಧ ಗೋಲುರಹಿತವಾಗಿತ್ತು. ಎರಡನೇ ಅವಧಿಯಲ್ಲಿ ವಿ.ಕೆ. ಗಿರೀಶ್ (58ನೇ ನಿಮಿಷ) ಮತ್ತು ಗುರ್ನೈಲಾಲ್ ಹಮರ್ (70ನೇ ನಿ.) ಅವರು ಗೋಲು ಗಳಿಸಿ ಎಂಇಜಿ ತಂಡದ ಗೆಲುವಿಗೆ ಕಾರಣರಾದರು.ಪ್ರಸಕ್ತ ಚಾಂಪಿಯನ್‌ಷಿಪ್‌ನಲ್ಲಿ ಎಂಇಜಿಗೆ ದೊರೆತ ನಾಲ್ಕನೇ ಗೆಲುವು ಇದಾಗಿದೆ. ಮತ್ತೊಂದೆಡೆ ಕೆಎಸ್‌ಪಿ ಮೊದಲ ನಿರಾಸೆ ಅನುಭವಿಸಿತು. ಪೊಲೀಸ್ ತಂಡ ಇದೀಗ ಐದು ಪಂದ್ಯಗಳಿಂದ ಹತ್ತು ಪಾಯಿಂಟ್ ಹೊಂದಿದೆ.ಸ್ಟೂಡೆಂಟ್ಸ್ ಯೂನಿಯನ್‌ಗೆ ಜಯ: `ಎ~ ಡಿವಿಷನ್ ಲೀಗ್ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಸ್ಟೂಡೆಂಟ್ಸ್ ಯೂನಿಯನ್ ತಂಡ 5-0 ಗೋಲುಗಳಿಂದ ಸರ್ಕಾರಿ ಮುದ್ರಣಾಲಯ ತಂಡವನ್ನು ಮಣಿಸಿತು.ಅರುಣ್ (7, 77 ಮತ್ತು 79ನೇ ನಿಮಿಷ), ಅಬೂಬಕರ್ (26) ಹಾಗೂ ಫಿಲಿಪ್ಸ್ (75) ಅವರು ಸ್ಟೂಡೆಂಟ್ಸ್ ಯೂನಿಯನ್ ತಂಡಕ್ಕೆ ಗೋಲು ತಂದಿತ್ತರು. ಶುಕ್ರವಾರ ನಡೆಯುವ ಪಂದ್ಯಗಳಲ್ಲಿ ಡಿವೈಎಸ್‌ಎಚ್- ಸದರ್ನ್ ಬ್ಲೂಸ್ ಮತ್ತು ಬಿಇಎಲ್- ಪೋಸ್ಟಲ್ ತಂಡಗಳು ಪೈಪೋಟಿ ನಡೆಸಲಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.