ಫುಟ್‌ಬಾಲ್: ಎಂಇಜಿ- ಕೆಎಸ್‌ಪಿ ಪಂದ್ಯ ಡ್ರಾ

7

ಫುಟ್‌ಬಾಲ್: ಎಂಇಜಿ- ಕೆಎಸ್‌ಪಿ ಪಂದ್ಯ ಡ್ರಾ

Published:
Updated:

ಬೆಂಗಳೂರು: ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್ (ಎಂಇಜಿ) ಮತ್ತು ಕರ್ನಾಟಕ ರಾಜ್ಯ ಪೊಲೀಸ್ (ಕೆಎಸ್‌ಪಿ) ತಂಡಗಳ ನಡುವಿನ ರಾಜ್ಯ ಸೂಪರ್ ಡಿವಿಷನ್ ಫುಟ್‌ಬಾಲ್ ಲೀಗ್ ಚಾಂಪಿಯನ್‌ಷಿಪ್‌ನ ಪಂದ್ಯ 1-1 ಗೋಲುಗಳ ಡ್ರಾದಲ್ಲಿ ಅಂತ್ಯಕಂಡಿತು.ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದ 15ನೇ ನಿಮಿಷದಲ್ಲಿ ಎಂ. ಕಾರ್ತಿಕ್ ಗೋಲು ಗಳಿಸಿ ಪೊಲೀಸ್ ತಂಡಕ್ಕೆ ಮುನ್ನಡೆ ತಂದಿತ್ತರು. ಆದರೆ ಎರಡನೇ ಅವಧಿಯಲ್ಲಿ ಎಂಇಜಿ ತಂಡದ ಗರ್ನೈಲಾಲ್ ಹಮರ್ ಚೆಂಡನ್ನು ಗುರಿ ಸೇರಿಸಿ ಸಮಬಲಕ್ಕೆ ಕಾರಣರಾದರು.ಎಜಿಒಆರ್‌ಸಿ ಮತ್ತು ಇಸ್ರೋ ನಡುವಿನ `ಎ' ಡಿವಿಷನ್ ಲೀಗ್ ಚಾಂಪಿಯನ್‌ಷಿಪ್‌ನ ಪಂದ್ಯವೂ 1-1 ಗೋಲುಗಳ ಡ್ರಾದಲ್ಲಿ ಕೊನೆಗೊಂಡಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry