ಫುಟ್‌ಬಾಲ್: ಎಂಇಜಿ- ಸಿಐಎಲ್ ಪಂದ್ಯಕ್ಕೆ ಮಳೆ ಅಡ್ಡಿ

7

ಫುಟ್‌ಬಾಲ್: ಎಂಇಜಿ- ಸಿಐಎಲ್ ಪಂದ್ಯಕ್ಕೆ ಮಳೆ ಅಡ್ಡಿ

Published:
Updated:
ಫುಟ್‌ಬಾಲ್: ಎಂಇಜಿ- ಸಿಐಎಲ್ ಪಂದ್ಯಕ್ಕೆ ಮಳೆ ಅಡ್ಡಿ

ಬೆಂಗಳೂರು:  ಎಸ್‌ಡಬ್ಲ್ಯುಆರ್ ತಂಡದವರು ಇಲ್ಲಿ ನಡೆಯುತ್ತಿರುವ ಬಿಡಿಎಫ್‌ಎ ಆಶ್ರಯದ `ಎ~ ಡಿವಿಷನ್ ಲೀಗ್ ಫುಟ್‌ಬಾಲ್ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ರೋಚಕ ಗೆಲುವು ಪಡೆದರು.ಅಕನಗರ ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಎಸ್‌ಡಬ್ಲ್ಯುಆರ್ 1-0 ಗೋಲಿನಿಂದ ಡಿವೈಎಸ್‌ಎಚ್ ತಂಡವನ್ನು ಮಣಿಸಿತು. ಪ್ರಬಲ ಪೈಪೋಟಿ ಕಂಡುಬಂದ ಪಂದ್ಯದ ಮೊದಲ ಅವಧಿ ಗೋಲುರಹಿತವಾಗಿತ್ತು.ಎರಡನೇ ಅವಧಿಯ 72ನೇ ನಿಮಿಷದಲ್ಲಿ ಅರುಲ್ ಅವರು ಎಸ್‌ಡಬ್ಲ್ಯುಆರ್ ತಂಡಕ್ಕೆ ಗೆಲುವಿನ ಗೋಲು ತಂದಿತ್ತರು. ಡಿವೈಎಸ್‌ಎಚ್ ತಂಡ ಸಮಬಲದ ಗೋಲಿಗಾಗಿ ನಡೆಸಿದ ಪ್ರಯತ್ನಕ್ಕೆ ತಕ್ಕ ಫಲ ಲಭಿಸಲಿಲ್ಲ.

 

ಎಂಇಜಿ- ಸಿಐಎಲ್ ಪಂದ್ಯ ರದ್ದು: ಎಂಇಜಿ ಮತ್ತು ಸಿಐಎಲ್ ತಂಡಗಳ ನಡುವಿನ ಸೂಪರ್ ಡಿವಿಷನ್ ಲೀಗ್ ಚಾಂಪಿಯನ್‌ಷಿಪ್‌ನ ಪಂದ್ಯ    ಮಳೆಯಿಂದಾಗಿ ಅರ್ಧದಲ್ಲೇ ಮೊಟಕುಗೊಂಡಿತು. ವಿರಾಮದ ವೇಳೆಗೆ ಎಂಇಜಿ 3-0 ಗೋಲುಗಳಿಂದ ಮುನ್ನಡೆ ಸಾಧಿಸಿತ್ತು.ಆದರೆ ಪಂದ್ಯದ 52ನೇ ನಿಮಿಷದಲ್ಲಿ ಮಳೆ ಸುರಿಯಲಾರಂಭಿಸಿತು. ಆ ಬಳಿಕ ಅಂಗಳದಲ್ಲಿ ಸಾಕಷ್ಟು ನೀರು ನಿಂತಿದ್ದ ಕಾರಣ ರೆಫರಿ ಪಂದ್ಯವನ್ನು ರದ್ದುಗೊಳಿಸುವ ತೀರ್ಮಾನ ಕೈಗೊಂಡರು. ಮರುಪಂದ್ಯ ನಡೆಸಬೇಕೇ ಎಂಬುದರ ಬಗ್ಗೆ ಸಂಘಟಕರು ಭಾನುವಾರ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ.ಭಾನುವಾರ ನಡೆಯುವ ಪಂದ್ಯಗಳಲ್ಲಿ ಬೆಂಗಳೂರು ಮಾರ್ಸ್‌- ಎಜಿಒಆರ್‌ಸಿ ಮತ್ತು ಆರ್‌ಡಬ್ಲ್ಯುಎಫ್- ಎಸ್‌ಎಐ ತಂಡಗಳು ಪೈಪೋಟಿ ನಡೆಸಲಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry