ಫುಟ್‌ಬಾಲ್: ಎಎಸ್‌ಸಿಗೆ ಮಣಿದ ರೈಲು ಕಾರ್ಖಾನೆ

7

ಫುಟ್‌ಬಾಲ್: ಎಎಸ್‌ಸಿಗೆ ಮಣಿದ ರೈಲು ಕಾರ್ಖಾನೆ

Published:
Updated:

ಬೆಂಗಳೂರು: ರೋಚಕ ಅಂತ್ಯ ಕಂಡ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ಆರ್ಮಿ ಸರ್ವಿಸ್ ಕಾರ್ಪ್ಸ್ (ಎಎಸ್‌ಸಿ) ತಂಡದವರು ಬಿಡಿಎಫ್‌ಎ ಆಶ್ರಯದಲ್ಲಿ ನಡೆಯುತ್ತಿರುವ ಸೂಪರ್ ಡಿವಿಷನ್ ಫುಟ್‌ಬಾಲ್ ಲೀಗ್ ಚಾಂಪಿಯನ್‌ಷಿಪ್‌ನ ಸೋಮವಾರದ ಪಂದ್ಯದಲ್ಲಿ ಗೆಲುವು ಸಾಧಿಸಿದರು.

ಅಶೋಕ ನಗರದಲ್ಲಿರುವ ರಾಜ್ಯ ಫುಟ್‌ಬಾಲ್ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಎಎಸ್‌ಸಿ 2-1ಗೋಲುಗಳಿಂದ ರೈಲು ಗಾಲಿ ಕಾರ್ಖಾನೆ (ಆರ್‌ಡಬ್ಲ್ಯುಎಫ್) ತಂಡವನ್ನು ಮಣಿಸಿತು.

ವಿಜಯಿ ತಂಡದ ಶ್ರೀಜಿತ್ 50ನೇ ನಿಮಿಷದಲ್ಲಿ ಗೋಲಿನ ಖಾತೆ ತೆರೆದರು. ಈ ತಂಡದ ಇನ್ನೊಂದು ಗೋಲನ್ನು ಜತಿನ್ ಸಿಂಗ್ 74ನೇ ನಿಮಿಷದಲ್ಲಿ ಎರಡನೇ ಗೋಲು ಗಳಿಸಿ ತಂಡದ ಗೆಲುವಿಗೆ ಕಾರಣರಾದರು. ಕೊನೆಯ ಹಂತದಲ್ಲಿ ಪ್ರಬಲ ಹೋರಾಟ ತೋರಿದ ಆರ್‌ಡಬ್ಲ್ಯುಎಫ್‌ನ ಪ್ರಕಾಶ್ 82ನೇ ನಿಮಿಷದಲ್ಲಿ ಒಂದು ಗೋಲು ಗಳಿಸಿದರು. ಈ ವೇಳೆ ಎಎಸ್‌ಸಿ ರಕ್ಷಣಾತ್ಮಕ ಆಟಕ್ಕೆ ಮುಂದಾಗಿ ಕೊನೆಗೆ ಗೆಲುವಿನ ನಗೆ ಬೀರಿತು.

ಡ್ರಾ ಪಂದ್ಯದಲ್ಲಿ ಕ್ರೀಡಾ ಪ್ರಾಧಿಕಾರ: ಭಾರತ ಕ್ರೀಡಾ ಪ್ರಾಧಿಕಾರ (ಎಸ್‌ಎಐ) ಮತ್ತು ಎಲ್‌ಆರ್‌ಡಿಇ ತಂಡಗಳ ನಡುವಿನ `ಎ' ಡಿವಿಷನ್ ಪಂದ್ಯವು 1-1ಗೋಲುಗಳಿಂದ ಡ್ರಾದಲ್ಲಿ ಅಂತ್ಯ ಕಂಡಿತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry