ಫುಟ್‌ಬಾಲ್: ಎಎಸ್‌ಸಿ ತಂಡಕ್ಕೆ ಸುಲಭ ವಿಜಯ

ಗುರುವಾರ , ಜೂಲೈ 18, 2019
29 °C

ಫುಟ್‌ಬಾಲ್: ಎಎಸ್‌ಸಿ ತಂಡಕ್ಕೆ ಸುಲಭ ವಿಜಯ

Published:
Updated:

ಬೆಂಗಳೂರು: ಹೊಂದಾಣಿಕೆಯ ಆಟವಾಡಿದ ಎಎಸ್‌ಸಿ ತಂಡದವರು ಬಿಡಿಎಫ್‌ಎ ಆಶ್ರಯದಲ್ಲಿ ಇಲ್ಲಿ ನಡೆಯುತ್ತಿರುವ `ಎ~ ಡಿವಿಷನ್ ಫುಟ್‌ಬಾಲ್ ಚಾಂಪಿಯನ್‌ಷಿಪ್ ಲೀಗ್ ಪಂದ್ಯದಲ್ಲಿ ಸುಲಭ ಗೆಲುವು ಪಡೆದರು.ಅಶೋಕ ನಗರ ಬೆಂಗಳೂರು  ಜಿಲ್ಲಾ ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಎಎಸ್‌ಸಿ ತಂಡ 4-0ಗೋಲುಗಳಿಂದ ಆರ್‌ಡಬ್ಲ್ಯುಎಫ್ ತಂಡವನ್ನು ಮಣಿಸಿ ಭಾರಿ ಅಂತರದ ಗೆಲುವನ್ನು ತಮ್ಮದಾಗಿ ಸಿಕೊಂಡಿತು.ವಿಜಯಿ ತಂಡದ ತಿರುವಾಂಕೂರಸ ಅವರು ಸೊಗಸಾಗಿ ಆಡಿ 32ನೇ ನಿಮಿಷದಲ್ಲಿ ಗೋಲಿನ ಖಾತೆಯನ್ನು ತೆಗೆದರು. ಇದರಿಂದ ಮುನ್ನಡೆ ಸಾಧಿಸಿದ ಎಎಸ್‌ಸಿ ತಂಡ ಮೇಲಿಂದ ಮೇಲೆ ಗೋಲು ಗಳಿಸಿತು. ಎ. ಶೇಕ್ ಕ್ರಮವಾಗಿ 37 ಹಾಗೂ 73ನೇ ನಿಮಿಷದಲ್ಲಿ ಗೋಲು ತಂದಿತ್ತರು. ನಂತರ ಚುರುಕಿನ ಆಟವಾಡಿದ  ತ್ಯಾಗರಾಜನ್ 77ನೇ ನಿಮಿಷದಲ್ಲಿ ಇನ್ನೊಂದು ಗೋಲನ್ನು ಗಳಿಸಿ ಗೆಲುವಿನ ಅಂತರ ಹೆಚ್ಚಿಸಿದರು.ಆರ್‌ಡಬ್ಲ್ಯುಎಫ್ ತಂಡ ಗೋಲು ಗಳಿಸುವ ಸಾಕಷ್ಟು ಅವಕಾಶಗಳನ್ನು ವಿಜಯಿ ತಂಡ ವಿಫಲ ಗೊಳಿಸಿತು.

ಆ ತಂಡದ ಗೋಲ್ ಕೀಪರ್ ಉತ್ತಮ ಆಟವಾಡಿ ಎಲ್ಲರ ಗಮನ ಸೆಳೆದರು ಹಾಗೆಯೇ ಎದುರಾಳಿ ತಂಡ ಗೋಲು ಗಳಿಸುವ ಅವಕಾಶಗಳನ್ನು ತಡೆದರು.ದಿನದ ಎಜಿಒಆರ್‌ಸಿ ಹಾಗೂ ಬಿಡಬ್ಲುಎಸ್‌ಎಸ್‌ಬಿ ತಂಡಗಳ ನಡುವಿನ ಪಂದ್ಯವು ಡ್ರಾ ದಲ್ಲಿ ಅಂತ್ಯ ಕಂಡಿತು.ಉಭಯ ತಂಡಗಳ ಆಟಗಾರರು ಗೋಲು ಗಳಿಸುವ ನಡೆಸಿದ ಯತ್ನ ಸಾಕಾಗಲಿಲ್ಲ.ಇಂದು ನಗರಕ್ಕೆ ಫಿಫಾ ಅಧಿಕಾರಿಗಳು: ನಗರದಲ್ಲಿ ನೂತನವಾಗಿ ಹಾಸಲಾಗಿರುವ ಕೃತಕ ಹುಲ್ಲು ಹಾಸಿನ ಅಂಗಳವನ್ನು ಅಂತಿಮವಾಗಿ ಪರಿಶೀಲಿಸಲು ಫಿಫಾ ಹಾಗೂ ಎಎಫ್‌ಸಿ ಅಧಿಕಾರಿಗಳು ಮಂಗಳವಾರ ಬೆಂಗಳೂರಿಗೆ ಆಗಮಿಸಲಿದ್ದಾರೆ. ಆದ್ದರಿಂದ  `ಎ~ ಡಿವಿಷನ್ ಲೀಗ್ ಫುಟ್‌ಬಾಲ್ ಚಾಂಪಿಯನ್‌ಷಿಪ್ ಲೀಗ್ ಪಂದ್ಯಗಳು ಜೂನ್ 7 ಹಾಗೂ 8ರಂದು ನಡೆಯುವುದಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry