ಗುರುವಾರ , ಅಕ್ಟೋಬರ್ 17, 2019
27 °C

ಫುಟ್‌ಬಾಲ್: ಎಚ್‌ಎಎಲ್‌ಗೆ ಗೆಲುವು ಲಭಿಸುವುದೇ?

Published:
Updated:

ಬೆಂಗಳೂರು: ಐ-ಲೀಗ್ ಫುಟ್‌ಬಾಲ್ ಟೂರ್ನಿಯಲ್ಲಿ ಸತತ ಸೋಲುಗಳಿಂದ ಆತ್ಮವಿಶ್ವಾಸ ಕಳೆದುಕೊಂಡಿರುವ ಎಚ್‌ಎಎಲ್ ತಂಡಕ್ಕೆ ಗೆಲುವಿನ ಅಗತ್ಯವಿದೆ. ಬೆಂಗಳೂರಿನಲ್ಲಿ ಬುಧವಾರ ನಡೆಯುವ ಸ್ಪೋರ್ಟಿಂಗ್ ಕ್ಲಬ್ ಡಿ ಗೋವಾ ವಿರುದ್ಧದ ಪಂದ್ಯದಲ್ಲಿ ಬೆಂಗಳೂರಿನ ತಂಡಕ್ಕೆ ಜಯ ಲಭಿಸುವುದೇ?ಉದ್ಯಾನನಗರಿಯ ಫುಟ್‌ಬಾಲ್ ಪ್ರೇಮಿಗಳನ್ನು ಕಾಡುತ್ತಿರುವ ಪ್ರಶ್ನೆಯಿದು. ಈ ಬಾರಿಯ ಟೂರ್ನಿಯಲ್ಲಿ ಎಚ್‌ಎಎಲ್‌ಗೆ ಎದುರಾಗಿರುವುದು ಸಾಲು ಸಾಲು ಸೋಲುಗಳು. ಆಡಿದ 12 ಪಂದ್ಯಗಳಲ್ಲಿ 11 ರಲ್ಲೂ ಎಚ್‌ಎಎಲ್ ಎದುರಾಳಿ ತಂಡಕ್ಕೆ ಶರಣಾಗಿದೆ.ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ನಡೆಯುವ ಹಣಾಹಣಿಯಲ್ಲಿ ಸ್ಪೋರ್ಟಿಂಗ್ ಕ್ಲಬ್ ಎಚ್‌ಎಎಲ್‌ಗೆ ಪ್ರಬಲ ಸವಾಲಾಗುವುದು ಖಚಿತ. ಏಕೆಂದರೆ ಗೋವಾದ ಈ ತಂಡ 12 ಪಂದ್ಯಗಳಿಂದ 13 ಪಾಯಿಂಟ್‌ಗಳನ್ನು ಕಲೆಹಾಕಿದೆ. ಮಾತ್ರವಲ್ಲ ಪಾಯಿಂಟ್ ಪಟ್ಟಿಯಲ್ಲಿ ತಂಡ 11ನೇ ಸ್ಥಾನದಲ್ಲಿದೆ.`ಇದು ಹೊಸ ವರ್ಷ. ನಾವು ಹೊಸ ಆರಂಭವನ್ನು ಬಯಸುತ್ತಿದ್ದೇವೆ. ಸ್ಪೋರ್ಟಿಂಗ್ ವಿರುದ್ಧ ಗೆಲುವು ದೊರೆತರೆ ನಮಗೆ ಟೂರ್ನಿಯಲ್ಲಿ ಮತ್ತೆ ಲಯ ಕಂಡುಕೊಳ್ಳಲು ಸಾಧ್ಯ~ ಎಂದು ಎಚ್‌ಎಎಲ್ ತಂಡದ ಮ್ಯಾನೇಜರ್ ಎಂ. ಮುರಳೀಧರನ್ ಹೇಳಿದ್ದಾರೆ.ಗಾಯದ ಕಾರಣ ಕಳೆದ ಮೂರು ವಾರಗಳಿಂದ ಅಂಗಳದಿಂದ ದೂರವುಳಿದಿದ್ದ ಜೋಸೆಫ್ ಫೆಮಿ ಬುಧವಾರ ಕಣಕ್ಕಿಳಿಯುವ ಸಾಧ್ಯತೆಯಿದೆ. ಮಂಗಳವಾರ ಅವರು ತಂಡದ ಇತರ ಸದಸ್ಯರ ಜೊತೆ ಅಭ್ಯಾಸದಲ್ಲಿ ಪಾಲ್ಗೊಂಡರು. ಫೆಮಿ ಆಡಲಿಳಿದರೆ ಎಚ್‌ಎಎಲ್‌ಗೆ ಹೆಚ್ಚಿನ ಬಲ ದೊರೆಯಲಿದೆ.ಮುನ್ನಡೆ ಆಟಗಾರರಾದ ಜೆ. ಹಮ್ಜಾ ಮತ್ತು ಆರ್.ಸಿ. ಪ್ರಕಾಶ್ ಆಕ್ರಮಣಕಾರಿ ಹಾಗೂ ಹೊಂದಾಣಿಕೆಯ ಆಟವಾಡಿದರೆ ಎಚ್‌ಎಎಲ್‌ಗೆ ಗೆಲುವಿನ ಕನಸು ಕಾಣಬಹುದು.

Post Comments (+)