ಬುಧವಾರ, ಜೂನ್ 16, 2021
23 °C

ಫುಟ್‌ಬಾಲ್: ಎಚ್‌ಎಎಲ್‌ಗೆ ಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಎಚ್‌ಎಎಲ್ ತಂಡದವರು ಮಂಗಳವಾರ ಇಲ್ಲಿ ಶುರುವಾದ ಬಿಡಿಎಫ್‌ಎ ಆಶ್ರಯದ ಸೂಪರ್ ಡಿವಿಷನ್ ಫುಟ್‌ಬಾಲ್ ಲೀಗ್ ಚಾಂಪಿಯನ್‌ಷಿಪ್‌ನ ಮೊದಲ ಪಂದ್ಯದಲ್ಲಿ ಶುಭಾರಂಭ ಮಾಡಿದ್ದಾರೆ.ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಎಚ್‌ಎಎಲ್ 3-0 ಗೋಲುಗಳಿಂದ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ತಂಡವನ್ನು ಸೋಲಿಸಿತು. ವಿರಾಮದ ವೇಳೆ 1-0 ಗೋಲಿನಿಂದ ಮುಂದಿದ್ದ ವಿಜಯಿ ತಂಡದ ದೀಪಕ್ ಪ್ರಕಾಶ್ (36ನೇ ನಿ.), ಹಮ್ಜಾ (79ನೇ ನಿ.) ಹಾಗೂ ಮೆಲೆಗಾಂಬ ಮೇಟಿ (80ನೇ ನಿ.) ಚೆಂಡನ್ನು ಗುರಿ ಸೇರಿಸಿದರು.`ಎ~ ಡಿವಿಷನ್ ಲೀಗ್ ಚಾಂಪಿಯನ್‌ಷಿಪ್‌ನ ಮೊದಲ ಪಂದ್ಯದಲ್ಲಿ ಬಿಯುಎಫ್‌ಸಿ ಗೆಲುವು ಸಾಧಿಸಿತು. ಈ ತಂಡದವರು 3-2 ಗೋಲುಗಳಿಂದ ಸದರ್ನ್ ಬ್ಲೂಸ್ ತಂಡವನ್ನು ಮಣಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.