ಫುಟ್‌ಬಾಲ್: ಎಡಿಇ ತಂಡ ಜಯಭೇರಿ

7

ಫುಟ್‌ಬಾಲ್: ಎಡಿಇ ತಂಡ ಜಯಭೇರಿ

Published:
Updated:

ಬೆಂಗಳೂರು: ಬಿಇಎಂಎಲ್ ಕೆಜಿಎಫ್ ಅಕಾಡೆಮಿ ತಂಡದ ಆಟಗಾರರು ಒಡ್ಡಿದ ಸವಾಲನ್ನು ಯಶಸ್ವಿಯಾಗಿ ಮೆಟ್ಟಿನಿಂತ ಎಡಿಇ ತಂಡದವರು ರಾಜ್ಯ ಸೂಪರ್ ಡಿವಿಷನ್ ಲೀಗ್ ಫುಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಜಯ ಸಾಧಿಸಿದರು.ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಎಡಿಇ 3-2 ಗೋಲುಗಳಿಂದ ಗೆಲುವು ತನ್ನದಾಗಿಸಿಕೊಂಡಿತು. ಶ್ರೀಧರನ್ (7ನೇ ನಿಮಿಷ), ಸಂತೋಷ್ (9) ಮತ್ತು ಅ್ಯಂಟೊ ಕ್ಸೇವಿಯರ್ (23) ಆರಂಭದಲ್ಲೇ ಗೋಲು ಗಳಿಸಿ ಎಡಿಇಗೆ 3-0 ಮುನ್ನಡೆ ತಂದಿತ್ತರು.ಮರು ಹೋರಾಟ ನಡೆಸಿದ ಕೆಜಿಎಫ್ ಪರ ರಾಜೇಶ್ (40) ಮತ್ತು ಟಿಕೆನ್ ಸಿಂಗ್ (59) ಚೆಂಡನ್ನು ಗುರಿ ಸೇರಿಸಿದರು. ಆದರೆ ಕೊನೆಯಲ್ಲಿ ರಕ್ಷಣೆಯನ್ನು ಮತ್ತಷ್ಟು ಬಲಪಡಿಸಿದ ಎಡಿಇ ಗೆಲುವು ಪಡೆಯಿತು.`ಎ' ಡಿವಿಷನ್ ಲೀಗ್ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಎಲ್‌ಆರ್‌ಡಿಇ 4-0 ಗೋಲುಗಳಿಂದ ಜವಾಹರ್ ಯೂನಿಯನ್ ತಂಡವನ್ನು ಮಣಿಸಿತು. ವಿಜಯಿ ತಂಡದ ಎಡ್ವಿನ್ ಜಾರ್ಜ್ (27), ವಿದ್ಯಾಸಾಗರ್ (36), ಚಂದ್ರ ಕುಮಾರ್ (56) ಮತ್ತು ಕಿರಣ್ (82) ಗೋಲು ಗಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry