ಫುಟ್‌ಬಾಲ್: ಎಲ್ಲರ ಕಣ್ಣು ಯೂರೊ ಫೈನಲ್‌ನತ್ತ...:ಇಟಲಿ-ಸ್ಪೇನ್: ಯಾರಿಗೆ ಚಾಂಪಿಯನ್ ಪಟ್ಟ?

7

ಫುಟ್‌ಬಾಲ್: ಎಲ್ಲರ ಕಣ್ಣು ಯೂರೊ ಫೈನಲ್‌ನತ್ತ...:ಇಟಲಿ-ಸ್ಪೇನ್: ಯಾರಿಗೆ ಚಾಂಪಿಯನ್ ಪಟ್ಟ?

Published:
Updated:
ಫುಟ್‌ಬಾಲ್: ಎಲ್ಲರ ಕಣ್ಣು ಯೂರೊ ಫೈನಲ್‌ನತ್ತ...:ಇಟಲಿ-ಸ್ಪೇನ್: ಯಾರಿಗೆ ಚಾಂಪಿಯನ್ ಪಟ್ಟ?

ಕೀವ್ (ರಾಯಿಟರ್ಸ್): ಒಂದೆಡೆ ಬಲಿಷ್ಟ ಸ್ಪೇನ್. ಇನ್ನೊಂದೆಡೆ ಯುವ ಆಟಗಾರರನ್ನು ಒಳಗೊಂಡಿರುವ ಇಟಲಿ. ಈ ತಂಡಗಳು ಭಾನುವಾರ ಇಲ್ಲಿ ನಡೆಯಲಿರುವ ಯೂರೊ ಫುಟ್‌ಬಾಲ್ ಚಾಂಪಿಯನ್‌ಷಿಪ್‌ನ ಫೈನಲ್‌ನಲ್ಲಿ ಪೈಪೋಟಿ ನಡೆಸಲು ಸಿದ್ಧವಾಗಿ ನಿಂತಿವೆ.ಹಾಗಾಗಿಯೇ ಈಗ ಫುಟ್‌ಬಾಲ್ ಪ್ರಿಯರ ಕಣ್ಣುಗಳೆಲ್ಲಾ ಕೀವ್ ಒಲಿಂಪಿಕ್ ಕ್ರೀಡಾಂಗಣದತ್ತ ನೆಟ್ಟಿವೆ. ಸುಂದರ ಕ್ರೀಡೆಯ ರೋಚಕ ಕ್ಷಣಗಳನ್ನು ಸವಿಯಲು ಅಭಿಮಾನಿಗಳು ಕಾತರರಾಗಿದ್ದಾರೆ.ಹಾಲಿ ಚಾಂಪಿಯನ್ ಕೂಡ ಆಗಿರುವ ಸ್ಪೇನ್ ಮತ್ತೊಮ್ಮೆ ಟ್ರೋಫಿ ಗೆಲ್ಲುವ ಉತ್ಸಾಹದಲ್ಲಿದೆ. ಆದರೆ 2000ರ ಫೈನಲ್‌ನಲ್ಲಿ ಫ್ರಾನ್ಸ್ ಎದುರು ನಿರಾಸೆ ಅನುಭವಿಸಿದ್ದ ಇಟಲಿ ಈ ಬಾರಿಯ ಅವಕಾಶವನ್ನು ತಪ್ಪಿಸಿಕೊಳ್ಳದಿರಲು ಯೋಜನೆ ರೂಪಿಸಿದೆ. ಜೊತೆಗೆ ಸ್ಪೇನ್‌ನ ಪಾರಮ್ಯಕ್ಕೆ ತಡೆಯೊಡ್ಡಲು ಸಜ್ಜಾಗಿದೆ.ವಾರ್ಸಾದಲ್ಲಿ ಗುರುವಾರ ನಡೆದ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಬಲಿಷ್ಠ ಜರ್ಮನಿಗೆ ಸೋಲುಣಿಸಿರುವ ಇಟಲಿಗೆ ಮುಂದಿರುವ ಸವಾಲಿನ ಅರಿವಿದೆ. ಆದರೆ ಸ್ಪೇನ್ ತನ್ನ ಸೆಮಿಫೈನಲ್ ಪಂದ್ಯದಲ್ಲಿ ಗೆಲ್ಲಲು ಪೋರ್ಚುಗಲ್ ವಿರುದ್ಧ ಪೆನಾಲ್ಟಿ ಶೂಟೌಟ್ ಮೊರೆ ಹೋಗಬೇಕಾಗಿತ್ತು.ಇಟಲಿ ನಾಲ್ಕು ಬಾರಿ ವಿಶ್ವಕಪ್ ಗೆದ್ದಿದೆ. ಆದರೆ 1968ರಲ್ಲಿ ಮೊದಲ ಬಾರಿ ಯೂರೊ ಚಾಂಪಿಯನ್ ಆಗಿದ್ದ ಈ ತಂಡ ಈ ಬಾರಿ ಟ್ರೋಫಿ ಎತ್ತಿ ಹಿಡಿಯುವ ವಿಶ್ವಾಸದಲ್ಲಿದೆ. `ನಾವು ಸ್ಪೇನ್ ತಂಡದ ದೌರ್ಬಲ್ಯದತ್ತ ಹೆಚ್ಚು ಗಮನ ಹರಿಸಿ ಆಡಲಿದ್ದೇವೆ. ಆದರೆ ಅದು ಅಷ್ಟು ಸುಲಭವಲ್ಲ. ಏಕೆಂದರೆ ಸ್ಪೇನ್ ವಿಶ್ವ ಹಾಗೂ ಯೂರೋಪಿಯನ್ ಚಾಂಪಿಯನ್~ ಎಂದು ಇಟಲಿ ತಂಡದ ಕೋಚ್ ಸಿಸೇರ್ ಪಾಂಡೆಲಿ ನುಡಿದಿದ್ದಾರೆ.ಈ ತಂಡದವರು 2011ರಲ್ಲಿ ನಡೆದ ಸೌಹಾರ್ದ ಪಂದ್ಯದಲ್ಲಿ 2-1ರಲ್ಲಿ ಸ್ಪೇನ್ ತಂಡವನ್ನು ಮಣಿಸಿದ್ದರು.

ಈ ಚಾಂಪಿಯನ್‌ಷಿಪ್‌ನಲ್ಲಿ ಈ ತಂಡಗಳು `ಸಿ~ ಗುಂಪಿನಲ್ಲಿದ್ದವು. ಉಭಯ ತಂಡಗಳ ನಡುವಿನ ಲೀಗ್ ಪಂದ್ಯ 1-1 ಡ್ರಾನಲ್ಲಿ ಕೊನೆಗೊಂಡಿತ್ತು. ಇಟಲಿ ತಂಡದವರೀಗ ಮಾರಿಯೊ ಬಾಲೊಟೆಲಿ ಅವರ ಮೇಲೆ ಭರವಸೆ ಇಟ್ಟಿದ್ದಾರೆ. ಏಕೆಂದರೆ ಮಾರಿಯೊ ಸೆಮಿಫೈನಲ್‌ನಲ್ಲಿ ಎರಡು ಗೋಲು ಗಳಿಸಿದ್ದರು.

 

`ನಾನು ಒಮ್ಮೆ ಗೋಲು ಗಳಿಸಲು ನಿರ್ಧಾರ ಮಾಡಿದರೆ ಖಂಡಿತ ಗೋಲು ಗಳಿಸುತ್ತೇನೆ~ ಎಂದು ಈ ಚಾಂಪಿಯನ್‌ಷಿಪ್‌ಗೂ ಮುನ್ನ ಹೇಳಿದ್ದ ಅವರು ಅದ್ಭುತಆಟದ ಮೂಲಕ ಎದುರಾಳಿ ರಕ್ಷಣಾ ಆಟಗಾರರಲ್ಲಿ ಭಯ ಮೂಡಿಸಿದ್ದಾರೆ.ಸ್ಪೇನ್ ಸತತ ಮೂರನೇ ಬಾರಿ ಅತಿ ದೊಡ್ಡ ಪ್ರಶಸ್ತಿ ಗೆಲ್ಲುವ ಭರವಸೆ ಹೊಂದಿದೆ. ಏಕೆಂದರೆ ಈ ತಂಡದವರು 2008ರಲ್ಲಿ ಯೂರೊ ಚಾಂಪಿಯನ್ ಆಗಿದ್ದರು. 2010ರ ವಿಶ್ವಕಪ್ ಗೆದ್ದಿದ್ದರು. ಅದನ್ನು ಸಾಧಿಸುವ ವಿಶ್ವಾಸದಲ್ಲಿ ಈ ತಂಡದ ಕೋಚ್ ಡೆಲ್ ಬೋಸ್ಕ್ ಇದ್ದಾರೆ.ಈ ತಂಡದಲ್ಲಿ ಹೆಸರಾಂತ ಸ್ಟ್ರೈಕರ್ ಇಲ್ಲ. ಆದರೆ ಈ ತಂಡದ ಶಾರ್ಟ್ ಪಾಸಿಂಗ್ ತಂತ್ರವಾದ `ಟಿಕಿ ಟಕಾ~ ಯಶಸ್ಸು ತಂದುಕೊಟ್ಟಿದೆ. ಸ್ಪೇನ್ ಈ ಹಿಂದೆ 1964 ಹಾಗೂ 2008ರಲ್ಲಿ ಪ್ರಶಸ್ತಿ ಗೆದ್ದಿತ್ತು. ಈಗ ಈ ತಂಡದಲ್ಲಿ ಐಕರ್ ಕ್ಯಾಸಿಲಾಸ್, ಸರ್ಜಿ ರಮೋಸ್, ಕ್ಸಾಬಿ ಅಲೋನ್ಸೊ, ಕ್ಸಾವಿ, ಇನಿಸ್ತಾ ಅವರಂತಹ ಆಟಗಾರರು ಇದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry