ಫುಟ್‌ಬಾಲ್: ಎಸ್‌ಎಐಗೆ ಮಣಿದ ಮಾರ್ಸ್‌

7
ಪೋಸ್ಟಲ್ ತಂಡಕ್ಕೆ ಜಯ

ಫುಟ್‌ಬಾಲ್: ಎಸ್‌ಎಐಗೆ ಮಣಿದ ಮಾರ್ಸ್‌

Published:
Updated:

ಬೆಂಗಳೂರು: ಪೋಸ್ಟಲ್ ತಂಡದವರು ಇಲ್ಲಿ ನಡೆಯುತ್ತಿರುವ ಬಿಡಿಎಫ್‌ಎ ಆಶ್ರಯದ ರಾಜ್ಯ ಸೂಪರ್ ಡಿವಿಷನ್ ಲೀಗ್ ಫುಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ರೋಚಕ ಜಯ ಸಾಧಿಸಿದರು.ಅಶೋಕನಗರ ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಪೋಸ್ಟಲ್ 2-1 ಗೋಲುಗಳಿಂದ ಡಿವೈಎಸ್‌ಎಸ್ ತಂಡವನ್ನು ಮಣಿಸಿ ಪೂರ್ಣ ಪಾಯಿಂಟ್ ತನ್ನದಾಗಿಸಿಕೊಂಡಿತು.ಕೆನೆತ್ (22ನೇ ನಿಮಿಷ) ಮತ್ತು ವೆಂಕಟೇಶ್ (30ನೇ ನಿ.) ಗೋಲು ಗಳಿಸಿ ಪೋಸ್ಟಲ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಡಿವೈಎಸ್‌ಎಸ್ ತಂಡದ ಏಕೈಕ ಗೋಲನ್ನು ಸುನಿಲ್ 55ನೇ ನಿಮಿಷದಲ್ಲಿ ತಂದಿತ್ತರು.ಈ ಗೆಲುವಿನ ಮೂಲಕ ಪೋಸ್ಟಲ್ ಮೂರು ಪಂದ್ಯಗಳಿಂದ ತನ್ನ ಪಾಯಿಂಟ್‌ಗಳನ್ನು ಐದಕ್ಕೆ ಹೆಚ್ಚಿಸಿಕೊಂಡಿತು. ಆಡಿದ ಮೂರೂ ಪಂದ್ಯಗಳಲ್ಲಿ ಸೋಲು ಅನುಭವಿಸಿದ ಡಿವೈಎಸ್‌ಎಸ್ ಇನ್ನೂ ಪಾಯಿಂಟ್ ಖಾತೆ ತೆರೆದಿಲ್ಲ.ಎಸ್‌ಎಐಗೆ ಜಯ: `ಎ' ಡಿವಿಷನ್ ಲೀಗ್ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಎಸ್‌ಎಐ ತಂಡ 2-0 ಗೋಲುಗಳಿಂದ ಬೆಂಗಳೂರು ಮಾರ್ಸ್‌ ತಂಡವನ್ನು ಸೋಲಿಸಿತು. ಪಾವೊನಿಯೊ ಹೊಕಿಪ್ (29) ಮತ್ತು ಸರೋಜ್ ರಾಯ್ (73) ವಿಜಯಿ ತಂಡದ ಪರ ಗೋಲು ಗಳಿಸಿದರು.ಮಂಗಳವಾರ ನಡೆಯುವ ಪಂದ್ಯಗಳಲ್ಲಿ ಎಜಿಒಆರ್‌ಸಿ- ಬೆಂಗಳೂರು ಕಿಕ್ಕರ್ಸ್ ಮತ್ತು ಎಡಿಇ- ಆರ್‌ಡಬ್ಲ್ಯುಎಫ್ ತಂಡಗಳು ಪರಸ್ಪರ ಪೈಪೋಟಿ ನಡೆಸಲಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry