ಫುಟ್‌ಬಾಲ್: ಕೆಎಸ್‌ಪಿಗೆ ಗೆಲುವು

ಶನಿವಾರ, ಜೂಲೈ 20, 2019
28 °C

ಫುಟ್‌ಬಾಲ್: ಕೆಎಸ್‌ಪಿಗೆ ಗೆಲುವು

Published:
Updated:

ಬೆಂಗಳೂರು: ಹೊಂದಾಣಿಕೆಯ ಆಟವಾಡಿದ  ಕೆಎಸ್‌ಪಿ ತಂಡದವರು ಬಿಡಿಎಫ್‌ಎ ಆಶ್ರಯದಲ್ಲಿ ನಡೆಯುತ್ತಿರುವ ರಾಜ್ಯ ಸೂಪರ್ ಡಿವಿಷನ್ ಫುಟ್‌ಬಾಲ್ ಲೀಗ್ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ರೊಚಕ ಗೆಲುವು ಪಡೆದರು.

ಅಶೋಕ ನಗರ ಬೆಂಗಳೂರು ಜಿಲ್ಲಾ ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಕೆಎಸ್‌ಪಿ ತಂಡ 1-0ಗೋಲುಗಳಿಂದ ಧರ್ಮರಾಜ ಯೂನಿಯನ್ ತಂಡವನ್ನು ಮಣಿಸಿತು

ವಿಜಯಿ ತಂಡದ ಪರ ಏಕೈಕ ಗೋಲನ್ನು ಎಲೆಕ್ಸ್ 77ನೇ ನಿಮಿಷದಲ್ಲಿ ಕಲೆ ಹಾಕಿ ಗೆಲುವಿನ ರೂವಾರಿ ಎನಿಸಿದರು. ವಿರಾಮಕ್ಕೆ ಮೊದಲು ಉಭಯ ತಂಡಗಳಿಂದ ಯಾವುದೇ ಗೋಲುಗಳು ಬರಲಿಲ್ಲ. ನಂತರ ಚುರುಕಿನ ಆಟವಾಡಿದ ಕೆಎಸ್‌ಪಿ ತಂಡ ಗೆಲುವಿನ ನಗೆ ಬೀರಿತು.

ಧರ್ಮರಾಜ್ ಯೂನಿಯನ್ ತಂಡದ ರಕ್ಷಣಾ ಪಡೆಯು ಮಾಡಿದ ಒಂದು ತಪ್ಪು ಕೆಎಸ್‌ಪಿ ತಂಡಕ್ಕೆ ಲಾಭದಾಯಕ ಎನಿಸಿತು.

ಎಲ್‌ಆರ್‌ಡಿಇ-ಎಡಿಇ ಪಂದ್ಯ ಡ್ರಾ: ಎಲ್‌ಆರ್‌ಡಿಇ-ಎಡಿಇ ನಡುವಿನ  `ಎ~ ಡಿವಿಷನ್ ಫುಟ್‌ಬಾಲ್ ಚಾಂಪಿಯನ್‌ಷಿಪ್‌ನ ಲೀಗ್ ಪಂದ್ಯವು ಡ್ರಾದಲ್ಲಿ ಅಂತ್ಯ ಕಂಡಿತು.

ಎಡಿಇ ಫುಟ್‌ಬಾಲ್ ಕ್ಲಬ್‌ನ ಪ್ರವೀಣ್ ಕುಮಾರ್ 3ನೇ ನಿಮಿಷದಲ್ಲಿ ಮೊದಲು ಗೋಲಿನ ಖಾತೆ ತೆರೆದರು. ಪ್ರವೀಣ್‌ಗೆ ಬೆಂಬಲ ನೀಡಿದ ಸಂತೋಷ್ 11ನೇ ನಿಮಿಷದಲ್ಲಿ ಮತ್ತೊಂದು ಗೋಲು ಗಳಿಸಿ ಗೆಲುವಿನ ಹಾದಿಯಲ್ಲಿ ತಂಡ ಹೆಜ್ಜೆ ಹಾಕಿತು. ನಂತರ ಆಕ್ರಮಣಕಾರಿ ಆಟವಾಡಿದ ಎಲ್‌ಆರ್‌ಡಿಇ ತಂಡದ ಜಾರ್ಜ್ ಹಾಗೂ ಪ್ರಭು ತಲಾ ಒಂದೊಂದು ಗೋಲು ಗಳಿಸಿ ರೋಚಕ ತಿರುವು ನೀಡಿದರು. ಆ ಗೋಲುಗಳು ಕ್ರಮವಾಗಿ 34 ಹಾಗೂ 41ನೇ ನಿಮಿಷದಲ್ಲಿ ಬಂದವು.

ಮೊದಲು ಗೆಲುವಿನ ಹಾದಿಯಲ್ಲಿದ್ದ ಎಡಿಇ ತಂಡ ಸೋಲಿನ ಆತಂಕ ಎದುರಿಸಿತು. ಆದರೆ ಎದುರಾಳಿ ತಂಡ ಯಾವುದೇ ಗೋಲು ಗಳಿಸದಂತೆ ನೋಡಿಕೊಂಡಿತು. ಉಭಯ ತಂಡಗಳು ರಕ್ಷಣಾತ್ಮಕ ಆಟಕ್ಕೆ ಒತ್ತು ನೀಡಿದ್ದರಿಂದ ಪಂದ್ಯ ಡ್ರಾದಲ್ಲಿ ಅಂತ್ಯ ಕಂಡಿತು.

ಶುಕ್ರವಾರದ ಪಂದ್ಯಗಳು: ರಾಯಲ್ ಫುಟ್‌ಬಾಲ್ ಕ್ಲಬ್-ಡಿವೈಎಸ್‌ಎಚ್ ಕ್ಲಬ್ (ಮಧ್ಯಾಹ್ನ 2ಗಂಟೆಗೆ) ಹಾಗೂ ಬಿಇಎಂಎಲ್-ಇಸ್ರೋ (ಸಂಜೆ 4ಕ್ಕೆ).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry