ಫುಟ್‌ಬಾಲ್: ಕೆಎಸ್‌ಪಿ ತಂಡಕ್ಕೆ ಗೆಲುವು

ಮಂಗಳವಾರ, ಜೂಲೈ 23, 2019
24 °C

ಫುಟ್‌ಬಾಲ್: ಕೆಎಸ್‌ಪಿ ತಂಡಕ್ಕೆ ಗೆಲುವು

Published:
Updated:

ಬೆಂಗಳೂರು: ಕಾರ್ತಿಕ್ ಅವರು ತಂದಿತ್ತು ಎರಡು ಗೋಲುಗಳ ನೆರವಿನಿಂದ ಕೆಎಸ್‌ಪಿ ತಂಡದವರು ಬಿಡಿಎಫ್‌ಎ ಆಶ್ರಯದಲ್ಲಿ ಇಲ್ಲಿ ನಡೆಯುತ್ತಿರುವ ಸೂಪರ್ ಡಿವಿಷನ್ ಲೀಗ್ ಫುಟ್‌ಬಾಲ್ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಜಯ ಸಾಧಿಸಿದರು.ಅಶೋಕನಗರದ ಬೆಂಗಳೂರು ಜಿಲ್ಲಾ ಫುಟ್‌ಬಾಲ್ ಸಂಸ್ಥೆ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಕೆಎಸ್‌ಪಿ 4-2 ಗೋಲುಗಳಿಂದ ಇಸ್ರೋ ತಂಡವನ್ನು ಮಣಿಸಿತು. ಕಾರ್ತಿಕ್ ಅವರು ಪಂದ್ಯದ 17 ಹಾಗೂ 54ನೇ ನಿಮಿಷದಲ್ಲಿ ಚೆಂಡನ್ನು ಗುರಿ ಸೇರಿಸಿದರು.ತಂಡದ ಇತರ ಎರಡು ಗೋಲುಗಳನ್ನು ಅರುಣ್ ಕುಮಾರ್ (8) ಮತ್ತು ಶ್ರೀನಾಥ್ (70) ತಂದಿತ್ತರು. ಇಸ್ರೋ ಪರ ತಾಮಾ (4) ಮತ್ತು ಸುಮನ್ (58) ಗೋಲು ಗಳಿಸಿದರು.`ಎ~ ಡಿವಿಷನ್ ಲೀಗ್ ಪಂದ್ಯದಲ್ಲಿ ಎಡಿಇ 6-0 ಗೋಲುಗಳಿಂದ ರಾಯಲ್ಸ್ ವಿರುದ್ಧ ಭರ್ಜರಿ ಜಯ ಸಾಧಿಸಿತು. ಮುರುಗನ್ (31, 34 ಮತ್ತು 51) ಹಾಗೂ ಪ್ರವೀಣ್ ಕುಮಾರ್ (55 ಮತ್ತು 71) ಅವರು ಎಡಿಇಗೆ ಗೋಲುಗಳನ್ನು ತಂದಿತ್ತರು.ರಾಯಲ್ಸ್ ತಂಡ ಒಂದು `ಸೆಲ್ಫ್~ ಗೋಲನ್ನು ಎದುರಾಳಿಗೆ ನೀಡಿತು.ಭಾನುವಾರದ ಪಂದ್ಯಗಳಲ್ಲಿ ಡಿವೈಎಸ್‌ಎಸ್- ಬಿಡಬ್ಲ್ಯುಎಸ್‌ಎಸ್‌ಬಿ ಹಾಗೂ ಸಿಐಎಲ್- ಬಿಇಎಂಎಲ್ ತಂಡಗಳು ಪೈಪೋಟಿ ನಡೆಸಲಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry